ದರ್ಶಿನಿ ಪ್ರಸಾದ್ ವನಗೂರು ಅವರು ಬರೆದ ಕವಿತೆ ‘ವ್ಯಾಮೋಹ’

ನವಮಾಸ ನೋವುಂಡು ನಗುತಲೇ ಹೆತ್ತು
ಸಲಹಿದಳು ಭವಿಷ್ಯದ ಕನಸುಗಳನು ಹೊತ್ತು

ಚತುರ ಕಂದನಿಗೆ ಸದಾ ವಿದ್ಯೆಯೆಡೆ ಚಿತ್ತ
ಬಾಲ್ಯವ ವ್ಯಯಿಸದೆ ಸಾಗಿದ ಯಶಸ್ಸಿನತ್ತ

ಸೆಳೆಯಿತು ಸಾಗರದಾಚೆ ಮಳೆಬಿಲ್ಲ ರಂಗು
ಹೆತ್ತವಳನೇ ಮರೆಸಿತು ವಿದೇಶದ ಗುಂಗು

ಹಣದ ವ್ಯಾಮೋಹಕೆ ಪರದೇಶದೆಡೆ ಹಾರಿದ
ಆಧುನಿಕತೆ ಮೋಹದಿ ತನ್ನವರನೆಲ್ಲಾ ತೊರೆದ

ಇಳಿ ವಯಸ್ಸಿನಾಸರೆಗಾಗಿ ಹೆತ್ತ ಕಂಗಳಿಲ್ಲಿ ಕಾದಿವೆ
ಪುತ್ರನ ಮರಳಿ ಸೇರುವಾಸೆಯಲಿ ಹಂಬಲಿಸಿವೆ

ಸಂಬಂಧಗಳ ಕಡೆಗಣಿಸಿ ಕಾಣದೂರಲಿ ಜೀವನ
ತಾಯ್ನಾಡ ಮಣ್ಣ ಋಣ ಮರೆಯುತಿಹರು ಜನ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop