ಅಪ್ಪಾರಳ್ಳಿ ತಿಪ್ಪಣ್ಣ
ಕಸವನು ಬುಟ್ಟಿಗೆ ಹಾಕಣ್ಣ
ಕಸವನು ಎಲ್ಲೆಂದರಲ್ಲಿ ಎಸೆದರೆ
ಕಾಯಿಲೆ ಬರುವುದು ಕೇಳಣ್ಣ
ಅಪ್ಪಾರಳ್ಳಿ ತಿಪ್ಪಣ್ಣ
ಸೈಕಲ್ ನೀನು ಏರಣ್ಣ
ಪೆಟ್ರೋಲ್ ವಾಹನ ಬಳಸಿದರೆ
ವಾಯುವು ಮಲಿನ ತಿಳಿಯಣ್ಣ|
ಅಪ್ಪಾರಳ್ಳಿ ತಿಪ್ಪಣ್ಣ
ಮಳೆ ನೀರನ್ನು ಹಿಡಿಯಣ್ಣ
ನೀರು ಇರದಿದ್ದರೆ ಅಯ್ಯೊ
ಧರೆಯದು ಉರಿವುದು ನೋಡಣ್ಣ|
ಅಪ್ಪಾರಳ್ಳಿ ತಿಪ್ಪಣ್ಣ
ಶೌಚಾಲಯವ ಬಳಸಣ್ಣ
ಬಯಲಲಿ ಶೌಚ ಮಾಡಿದರೆ
ರೋಗ ಹರಡುವುದು ಕೇಳಣ್ಣ|
ಅಪ್ಪಾರಳ್ಳಿ ತಿಪ್ಪಣ್ಣ
ಶಾಲೆಗೆ ತಪ್ಪದೆ ಹೋಗಣ್ಣ
ಓದು ಬರಹ ಲೆಕ್ಕವ ಕಲಿತರೆ
ಬಾಳು ಬೆಳಗುವುದು ಕೇಳಣ್ಣ
ಅಪ್ಪಾರಳ್ಳಿ ತಿಪ್ಪಣ್ಣ
ನೈತಿಕ ಮೌಲ್ಯವ ಕಲಿಯಣ್ಣ
ಮಾನವೀಯತೆಯನ್ನು ಮರೆತರೆ
ವಿದ್ಯೆಯು ವ್ಯರ್ಥ ಕೇಳಣ್ಣ