ಧಾರವಾಡದ ನಿವೃತ್ತ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳಾದ ಜಿ. ಬಿ. ಹೊಂಬಳ ಅವರು, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಕಾರ್ಯ ನಿರ್ವಹಿಸುವಂತಹ ಕ್ರಿಯಾಶೀಲ ಉತ್ಸಾಹಿ ಲೇಖಕರ ಕೃತಿಗಳಿಗೆ ಕೊಡಮಾಡುವ 2024 ನೇ ಸಾಲಿನ ‘ಜಿ. ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ’ಗೆ ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ಮಕ್ಕಳ ಸಾಹಿತಿಗಳೂ ಆದ ರಾಜಶೇಖರ ಕುಕ್ಕುಂದಾ ಅವರ ‘ಬಿಸಿ ಬಿಸಿ ಬಾತು’ (ಮಕ್ಕಳ ಪದ್ಯಗಳು) ಕೃತಿ ಆಯ್ಕೆಯಾಗಿದೆ.
ದಿನಾಂಕ 10 ನವಂಬರ 2024 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಲಾಗುವ ಸಮಾರಂಭದಲ್ಲಿ ಪ್ರಶಸ್ತಿಯ ಮೊತ್ತ 15,000 (ಹದಿನೈದು ಸಾವಿರ) ರೂಪಾಯಿ ನಗದು ಹಾಗೂ ಪ್ರಶಸ್ತಿಪತ್ರ ಮತ್ತು ಸ್ಮರಣಫಲಕ ನೀಡಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿ. ಬಿ. ಹೊಂಬಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿ. ಬಿ. ಹೊಂಬಳ, ಧಾರವಾಡ
( ಮೊ:9880142632)