ಸಂಗೀತ ಮತ್ತು ಸಾಹಿತ್ಯ ಮಾತ್ರ ನಮ್ಮನ್ನು ಉನ್ನತೀಕರಿಸಬಲ್ಲದು – ಕೆ.ಎಸ್. ಈಶ್ವರಪ್ಪ

ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಒಂದು ಮಾಧ್ಯಮವಿದೆಯೆಂದರೆ, ಅದು ಸಂಗೀತ ಮತ್ತು ಸಾಹಿತ್ಯ. ಇವೆರಡನ್ನೂ ಸಮೀಕರಿಸಿ ಇಂದು ಹೆಮ್ಮೆಯ ಗಾಯಕ ಶಂಕರ ಶಾನುಭೋಗ ಅವರು ನಾಡಿನಾದ್ಯಂತ “ಕಾವ್ಯ ಸಂಗೀತ” ಹೆಸರಿನಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಅದರ ಅಂಗವಾಗಿ ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಸಹಯೋಗದೊಡನೆ ಈ ಅದ್ಭುತ ನಡೆಯುತ್ತಿರುವುದು ಶ್ಲಾಘನೀಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಅವರು ಕರ್ನಾಟಕ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಖ್ಯಾತ ಸುಗಮ ಸಂಗೀತಗಾರ ಶಂಕರ ಶಾನುಭೋಗ ಮಾತನಾಡಿ ಸಂಗೀತ ಮನರಂಜನೆಗೆ ಸಂಗೀತ ಕೇಳದೆ ಅದನ್ನು ಅರ್ಥಮಾಡಿಕೊಂಡು ಕೇಳಿದರೆ ಮಾತ್ರ ಸಂಗೀತಕ್ಕೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ತಿಳಿಸಿದರು. ತಮ್ಮ ಉದ್ದೇಶ ಮನರಂಜನೆ ಜೊತೆಗೆ ಸಾಹಿತ್ಯದ ಹಿರಿಮೆಯನ್ನು ಎತ್ತಿ ಹಿಡಿಯುವುದೇ ಆಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಅವರು ಮಾತನಾಡಿ, ಕಾವ್ಯ ಸಂಗೀತ ಎಂಬ ಪರಿಕಲ್ಪನೆಯೇ ಆಕರ್ಣಕವಾಗಿರುವಂತಹದ್ದು. ಉತ್ತಮ ಸಾಹಿತ್ಯ ಮತ್ತು ಒಳ್ಳೆಯ ಸಾಹಿತ್ಯ ಸೇರಿದರೆ ಅದು ಅಧ್ಯಾತ್ಮ ಪ್ರಜ್ಞೆ ಯನ್ನು ಬಡಿದೆಬ್ಬಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕಿಕ್ಕಿರಿದು ಸೇರಿದ್ದ ಸಂಗೀತಪ್ರಿಯರು ಶಂಕರ್ ಶಾನುಭೋಗ್ ಹಾಡಿದ ವಚನಗಳು, ದಾಸರ ಪದಗಳು, ಶರೀಫರ ಮತ್ತು ಅನೇಕ ಕವಿಗಳ ಕವಿತೆಗಳನ್ನು ಅರ್ಥ ಸಹಿತ ಕೇಳಿ ಸಂತೋಷಿಸಿದರು.

ಚಿರಂತನ ಯೋಗ ಟ್ರಸ್ಟ್ ನ ಅಧ್ಯಕ್ಷರಾದ ಶಾಂತಾ ಶೆಟ್ಟಿಯವರು ಪ್ರಸ್ತಾವಿಕವಾಗಿ ಮಾತನಾಡಿದರು. ವಿನಯ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸಂಘ ಮತ್ತು ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಶಂಕರ್ ಶಾನುಭೋಗ್ ಅವರನ್ನು ಆತ್ಮಿಯವಾಗಿ ಸನ್ಮಾನಿಸಲಾಯಿತು.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop