ಕಿತ್ತೋದ ಚಪ್ಪಲಿಯನು ತಂದು ಹೊಲಿ ಎಂದ
ಸೆವೆದೋದ ಬೂಟನು ಎಸೆದು ಹೊಲಿ ಎಂದ
ದಾರ ಖಾಲಿಯಾಗಿದೆ ಸ್ವಾಮಿ ತರುವೆ ಎಂದಾಗ
ನಿನ್ನ ನರವನೇ ಕಿತ್ತು ದಾರವಾಗಿಸಿ ಹೊಲಿ ಎಂದ
ಬೂಟಿನ ಬಣ್ಣ ಹರಿದ ಚೀಲದಲಿ ಕಳೆದಿದೆಯೆಂದಾಗ
ನಿನ್ನ ನೆತ್ತರದಿಂದಲೇ ಬೂಟಿಗೆ ಬಣ್ಣವನು ಬಳಿ ಎಂದ
ಜೋಡುವಿಗೆ ಜೊತೆಯಾಗುವ ಚಮ೯ವಿಲ್ಲ ಎಂದಾಗ
ನಿನ್ನ ಕರಿಮೈಯಿನ ಚಮ೯ವನೇ ಸುಲಿದು ಹೊಲಿ ಎಂದ
ಸ್ವಾಭಿಮಾನದ ನೆತ್ತರು ಬಿಸಿಯಾಗಿ ಕತ್ತಿ ಕೈಗೆತ್ತಿಕೊಂಡ ನಾನಿ
ದೀನನಂತೆ ಕರ ಜೋಡಿಸಿ ತಲೆಬಾಗಿ ನನ್ನ ಕೆರ ಹೊಲಿ ಎಂದ