ವನ್ಯಜೀವಿ ಛಾಯಾಗ್ರಾಹಕ, ಲೇಖಕ ಮಾಲತೇಶ ಅಂಗೂರ ಅವರು ತೆಗೆದ ಫೋಟೋ
ಇತ್ತೀಚಿನ ದಿನಗಳಲ್ಲಿ ಹಾವೇರಿಜಿಲ್ಲೆಯ ತುಂಗಭದ್ರಾ ಹಾಗೂ ವರದಾನದಿಯಪಾತ್ರದಲ್ಲಿ “ನೀರುನಾಯಿ”ಗಳು ಹೆಚ್ಚಾಗಿ ಪ್ರತ್ಯಕ್ಷವಾಗುತ್ತಿದ್ದು, ಇವುಗಳು ವನ್ಯಜೀವಿ ಅಧ್ಯಯನಾಸಕ್ತರ ಗಮನ ಸೆಳೆದಿವೆ. ಹಾವೇರಿಜಿಲ್ಲೆಯ ರೈತರ ಹಾಗೂ ಜನರ ಜೀವನಾಡಿಯಾಗಿರುವ ತುಂಗಭದ್ರಾ ನದಿಯಲ್ಲಿ ಅಪರೂಪದ ಆಗಾಗ ನೀರುನಾಯಿಗಳು ಕಾಣಸಿಗುತ್ತಿವೆ.
ಹಾವೇರಿ ತಾಲೂಕಿನ ನದಿಗಳ ಸಂಗಮಸ್ಥಾನ ಗಳಘನಾಥದಬಳಿ ತುಂಗಭದ್ರಾ ನದಿಯಲ್ಲಿ, ಹಾನಗಲ್ಲ ತಾಲೂಕಿನಲ್ಲಿನ ವರದಾನದಿಯಲ್ಲಿ “ನೀರುನಾಯಿಗಳು” ಪ್ರತ್ಯಕ್ಷವಾಗಿದ್ದವು. ಇನ್ನು ಅಚ್ಚರಿಯ ಸಂಗತಿಯೆಂದರೆ ಹಾವೇರಿ ತಾಲೂಕಿನ ಗುತ್ತಲದ ದೊಡ್ಡಕೆರೆಯಲ್ಲಿ ನೀರುನಾಯಿಗಳು ಕಂಡು ಬಂದಿದ್ದವು. ಗುತ್ತಲಕೆರೆಯಲ್ಲಿ ನೀರುನಾಯಿ ಇರುವುದನ್ನು, ನೀರು ನಾಯಿಗಳು ಸ್ವಚ್ಚಂದವಾಗಿ ಆಟವಾಡುವುದನ್ನು ನಾನೇ ಕ್ಯಾಮರಾದಲ್ಲಿ ದಾಖಲಿಸಿರುವೆ.
ಇತ್ತೀಚೆಗೆ ಅಂದರೆ ಮೇ ಮೊದಲವಾರದಲ್ಲಿ ಹಾವೇರಿಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕವಲೆತ್ತುಗ್ರಾಮದಬಳಿ ಹರಿದಿರುವ ತುಂಗಭದ್ರಾನದಿಯಲ್ಲಿ ಮರ‍್ನಾಲ್ಕು “ನೀರುನಾಯಿಗಳು” ಕಂಡುಬಂದವು. ಇವುಗಳ ಛಾಯಾಚಿತ್ರಗಳನ್ನು ಸಂಶೋಧಕ ಉಪನ್ಯಾಸಕರಾಗಿರುವ ಪ್ರಮೋದ ನಲವಾಗಿಲು ಮತ್ತು ಅವರ ತಂಡ ಮೊಬೈಲ್‌ನಲ್ಲಿ ದಾಲಿಸಿದೆ. ಈಚೆಗೆ “ನೀರುನಾಯಿಗಳು” ತುಂಗಭದ್ರಾನದಿಯಲ್ಲಿ ಹೆಚ್ಚೆಚ್ಚು ಕಂಡು ಬರತೊಡಗಿವೆ. ತುಂಗಭದ್ರಾ ನದಿಯಲ್ಲಿ ಅಪರೂಪದ ಪ್ರಾಣಿ “ನೀರುನಾಯಿಗಳು” ಕಂಡು ಬರುತ್ತಿರುವುದು ವನ್ಯಜೀವಿ ಪ್ರೇಮಿಗಳಿಗೆ ಖುಷಿ ತಂದಿದೆ.
ನಮ್ಮ ಸುತ್ತ ಮತ್ತಲಿನ ನದಿಪಾತ್ರಗಳಲ್ಲಿ ಕಂಡು ಬಂದಿರುವ ನೀರುನಾಯಿಗಳನ್ನು “ಪ್ರೇಶ್ ವಾಟರ್ ಓಟರ್”ಎಂಬ ಹೆಸರಿನಿಂದ ಗುರುತಿಸಲಾಗಿದೆ. ಇವುಗಳು ಹೆಚ್ಚಾಗಿ ವಿಜಯನಗರಜಿಲ್ಲೆಯ ಹಂಪಿಯಬಳಿ ಹಾಗೂ ಕೊಪ್ಪಳಜಿಲ್ಲೆಯ ಮುದ್ಲಾಪುರಬಳಿ ನದಿಪಾತ್ರದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. “ನೀರು ನಾಯಿಗಳು” ನದಿಯಪಾತ್ರದಗುಂಟ ಇಲ್ಲಿಗೆ ವಲಸೆ ಬಂದಿರುವ ಸಾಧ್ಯತೆಗಳು ಹೆಚ್ಚು!. ನದಿ, ಕೆರೆ ಮತ್ತು ಅಣೆಕಟ್ಟಿನ ಹಿನ್ನೀರು ಪ್ರದೇಶಗಳಲ್ಲಿ ಇವುಗಳ ವಾಸಸ್ತಾನ. ಮೀನು, ಸೀಗಡಿ, ಏಡಿ, ಕಪ್ಪೆ, ಸಣ್ಣ ಹಕ್ಕಿಗಳು ಹಾಗೂ ಕೀಟಗಳು ಇವುಗಳ ಆಹಾರ. ಇಂತಹ ಪ್ರಾಣಿ ಹಾವೇರಿಜಿಲ್ಲೆಯನದಿ ತುಂಗಭದ್ರಾ ಹಾಗೂ ವರದಾನದಿಗಳಲ್ಲಿ ಪತ್ತೆಯಾಗಿರುವುದಕ್ಕೆ ವನ್ಯಜೀವಿ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನೀರಿನ ಪ್ರದೇಶಗಳ ಒತ್ತುವರಿ, ಜಲವಿದ್ಯುತ್ ಯೋಜನೆ ಅನುಷ್ಠಾನ, ಕಳ್ಳ ಬೇಟೆ ಇತರೆ ಕಾರಣಗಳಿಂದಾಗಿ ನೀರುನಾಯಿಗಳ ಅವಾಸಸ್ಥಾನಗಳ ನಾಶವಾಗುತ್ತಿದ್ದು, ಸುರಕ್ಷಿತ ನೆಲೆಅರಸಿ ಈ ಪ್ರಾಣಿಗಳ ಸಂಚರಿಸುತ್ತಿರಬಹುದೇ ಎನ್ನುವ ಅನುಮಾನ ನನ್ನದು!. ಅಂತಾರಾಷ್ಟ್ರೀಯ ಸಂಸ್ಥೆ ಐ.ಯು.ಸಿ.ಎನ್. ಈ ಪ್ರಾಣಿಯನ್ನು ನಶಿಸುತ್ತಿರುವ ವನ್ಯಜೀವಿ ಎಂದು ಪರಿಗಣಿಸಿ ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨ರ ಪ್ರಕಾರ ಇದನ್ನು ಶೆಡ್ಯೂಲ್ ೨ರಲ್ಲಿ ಸೇರಿಸಿದೆ. ಸೂಕ್ಷ್ಮ ಜೀವಿಗಳು ಕಂಡುಬರುತ್ತಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಕೂಡ ಆಶಾಭಾವ ಒಡಮೂಡಿದೆ.
“ನೀರು ನಾಯಿ” ಸಂರಕ್ಷಣೆಗೆ ಜಲವಿದ್ಯುತ್ ಯೋಜನೆಗಳನ್ನು ಈ ಆವಾಸಸ್ಥಾನಗಳಿಂದ ಹೊರಗಿಡಬೇಕು ಮತ್ತು ಸಂರಕ್ಷಣಾ ಪ್ರಯತ್ನಗಳು ಜನರನ್ನು ಓಟರ್ ಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಂರಕ್ಷಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಸಕ್ರಿಯಗೊಳಿಸುವ ಮೂಲಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ರಚಿಸಬೇಕಾಗಿದೆ. ಮಾಲಿನ್ಯ, ಮೀನುಗಾರಿಕೆ ಮತ್ತು ಮರಳು ಗಣಿಗಾರಿಕೆಗಳು, “ನೀರು ನಾಯಿ” ವಿನಾಶದ ಅತಿದೊಡ್ಡ ಕಾರಣಗಳಾಗಿವೆ.
“ನೀರುನಾಯಿಗಳು” ಅರೆ-ಜಲ ಪ್ರಾಣಿಗಳಾಗಿವೆ ಮತ್ತು ಅವುಗಳ ಚಲನೆಗಳನ್ನು ಮೀಸಲುಗೆ ಸೀಮಿತಗೊಳಿಸಲಾಗುವುದಿಲ್ಲ. ಹೇಗಾದರೂ, ಮೀಸಲು ಹೊಂದಿರುವ ಜಾತಿಗಳು ಮತ್ತು ಅವರ ಅಗತ್ಯಗಳ ಬಗ್ಗೆ ಅರಿವು ಬಲಪಡಿಸುತ್ತದೆ. ೧೯೭೨ ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಷೆಡ್ಯೂಲ್ ೧ ಮತ್ತು ವೇಳಾಪಟ್ಟಿಯ ೨ ಅಡಿಯಲ್ಲಿ ಅತಿಹೆಚ್ಚು ರಕ್ಷಣೆಯನ್ನು ನೀಡುವ ಈ ತ್ರಿಶೂನ್ಯ ಸಸ್ತನಿಗಳಿಗೆ ಆವಾಸಸ್ಥಾನವನ್ನು ಸಂರಕ್ಷಿಸುವಲ್ಲಿ ಇದು ಧನಾತ್ಮಕ ಕೊಡುಗೆ ನೀಡುತ್ತದೆ.
ಮೀನು ಮತ್ತು ಕಠಿಣ ಚರ್ಮಿಗಳ ಮೇಲಿರುವ ಆಹಾರವನ್ನು ಹೊಂದಿರುವ ವಿಶ್ವದ ೧೩ ಒಟರ್ಗಗಳಲ್ಲಿ ಮೂರು ದೇಶಗಳಿಗೆ ಭಾರತ ನೆಲೆಯಾಗಿದೆ. ದೇಶದಲ್ಲಿ ಮೂರು ಜಾತಿಗಳ ಪೈಕಿ ಅತಿದೊಡ್ಡ-ಹೊದಿಕೆಯ “ನೀರುನಾಯಿ”ಗಳು, ಸಾಂಪ್ರದಾಯಿಕವಾಗಿ ಒಂದು ಸಿಹಿನೀರಿನ ಪ್ರಭೇದವಾಗಿದೆ. ಅಲ್ಲದೇ ಅತಿ ಚಿಕ್ಕ ಪ್ರಭೇದ ಹಾವೇರಿಯ ಪರಿಸರದಲ್ಲಿ ಕಂಡಿರುವ ನೀರುನಾಯಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದರೆ, ಹಾವೇರಿಯ ಪರಿಸರದಲ್ಲಿ ಪತ್ತೆಯಾಗಿರುವ”ನೀರು ನಾಯಿ” ಅತಿಚಿಕ್ಕ ಪ್ರಬೇದವಾಗಿದ್ದು ಸುಮಾರು ೧ ಮೀ ಉದ್ದವಿದ್ದು ೧೦ರಿಂದ ೧೫ ಕೆ.ಜಿವರೆಗೆ ತೂಕವಿರಬಹುದು ಎಂದು ಅಂದಾಜಿಸಲಾಗಿದೆ.
ಕಬ್ಬು, ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕ ವಿಷಗಳು ನೀರಿನಲ್ಲಿ ಬೆರೆತು ನೀರುನಾಯಿಗಳು ಬೇಟೆಯಾಡುವ ಮೀನು ಮತ್ತಿತರ ಪ್ರಾಣಿ-ಪಕ್ಷಿಗಳ ದೇಹ ಸೇರಿ ಆವುಗಳನ್ನು ತಿನ್ನುವ “ನೀರುನಾಯಿಗಳ ದೇಹ ಸೇರಿ ನೀರುನಾಯಿಗಳು ಅಪಾಯಕ್ಕೆ ಸಿಲುಕಿವೆ” ಎನ್ನುವ ಆಕ್ಷೇಪಣೆಗಳಿವೆ.
ಏನೇ ಆದರು ಅಳುವಿನಂಚಿನಲ್ಲಿರುವ “ನೀರುನಾಯಿಗಳನ್ನು (“ಪ್ರೇಶ್ ವಾಟರ್ ಓಟರ್”) ಸಂರಕ್ಷಿಸುವ ಹೊಣೆ ನಮ್ಮದಾಗಬೇಕಿದೆ”.
“ನೀರು ನಾಯಿ”ಗಳು ಇರುವ ತುಂಗಭದ್ರಾದ ನದಿಯ ಹರಿವಿನ ೩೪ ಕಿ.ಮೀ.ಪ್ರದೇಶವನ್ನು ದಾಟಿ ನೀರು ನಾಯಿಗಳು ಬಯಲು ಅರೆಮಲೆನಾಡು ಪ್ರದೇಶವಾಗಿರುವ ಹಾವೇರಿಯ ಪರಿಸರದಲ್ಲಿ ಕಾಣಿಸಿಕೊಂಡಿದ್ದೇಕೆ? ಎನ್ನುವ ಬಗ್ಗೆ ನೀರುನಾಯಿಗಳ ಬಗ್ಗೆ ಕಾಳಜಿ ಹೊಂದಿರುವ ಸಂಸ್ಥೆಗಳು, ಅರಣ್ಯ ಮತ್ತು ಪರಿಸರ ಇಲಾಖೆ ಸಂಶೋಧನೆ ನಡೆಸಬೇಕು. ಹಾವೇರಿಜಿಲ್ಲೆಯಲ್ಲಿ ಕಾಣಿಸುತ್ತಿರುವ ನೀರುನಾಯಿಗಳಿಗೆ ನೆಲೆ ಒದಗಿಸುವ ಮೂಲಕ ನೀರುನಾಯಿಗಳ ಸಂರಕ್ಷಣೆಗೆ ಮುಂದಾಗಬೇಕಿದೆ.