ನೆರಳಾಗಿ ಬದುಕೆಂದು ಹಾರೈಸಿದಾ ದೇವ
ಬದಕು ನೆರಳಾಗಿಸುವ ಕಾಯಕವು ನನದಾಯ್ತು
ಗಿಡವಾಗಿ ಬೆಳೆದೆ ಮುಗುದ ಮಗುವಿನಂತೆ
ಮರವಾಗಿ ಬೆಳೆದೆ ಶ್ರೀರಾಮನಂತೆ
ವರವಾಗಿ ಕೊಟ್ಟೆ ಹಣ್ಣು ಹಂಪುಗಳನು
ಶಿರಬಾಗಿ ನಿಂತೆ ಮನುಕುಲಕೆ ತಂಪಾಗಿ
ಖುಷಿಯ ಹೊನಲನು ಹರಿಸಿ ಹಸಿರಾಗಿ ನಿಂದೆ
ಹೂವು ಅರಳಿಸಿ ಪರಿಮಳವ ಬೀರುತ
ಕಾಯಾಗಿ ನಿಂದೆ ಭಾರ ಹೊರುತಲಿ
ನಗುತ ಸಹಿಸಿದೆ ನೋವುಗಳ ಹಾದಿಯನು
ಕೊಯದಾಗ, ಬಡಿದಾಗ, ಮರ ಹತ್ತಿ ಕುಣಿದಾಗ
ಮೌನದಲಿ ಹೇಳಿದೆ ನಿಮ್ಮ ಖುಷಿಯೇ ನನ್ನ ಖುಷಿ
ಭೂಮಿ ಹೇಳಿತು ತೀರಾ ಸಹನೆಯು ಒಳಿತಲ್ಲ
ಭೂಮಿಗೆ ಹೇಳಿದೆ ನಾನು ನನ್ನ ಭಾರ ಹೊತ್ತು ನೀ ನಿಂದೆಯಲ್ಲ
ಅವರವರ ಕರ್ಮ ಜೀವನದ ಮರ್ಮ
ಬದುಕು ನೆರಳಾಗಬೇಕು
ನೆರಳಾಗಿ ಬದುಕಬೇಕು
ಜಯಪ್ರಕಾಶ ಹಬ್ಬು ಅವರು ಬರೆದ ಕವಿತೆ ‘ಪ್ರಕೃತಿ ಹಾಗೂ ನೆರಳು’
ಚಂದಾದಾರರಾಗಿ
3 ಪ್ರತಿಕ್ರಿಯೆಗಳು
ಆಸಕ್ತರು ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ವಾಟ್ಸಾಪ್ ಗುಂಪನ್ನು ಸೇರಬಹುದು.
https://chat.whatsapp.com/KL90U4wqSPAF01iRxqfcgm