ನದಿ ನಡುವಲ್ಲೊಂದು
ಕಲ್ಲುಗುಂಡು
ಕುಳಿತಾವದರ ಮೇಲೆ
ಬೆಳ್ಳಕ್ಕಿ ಹಿಂಡು
ಬೇಸಿಗೆಯ ಮುದಿ ನದಿಗೆ
ಮುತ್ತಿದೆ ಬೆಸ್ತರ ದಂಡು
ನಿಶಕ್ತಿಯಲ್ಲಿ ಉಸಿರಿದೆ ಕೃಷ್ಣೆ
ಹೋಗಿರಿ ಉಂಡು
ಬೆದರಿದವು ಚದುರಿದವು
ಜಲಚರ,ವಾಗರಿಕರ ಕಂಡು
ಮೌನ ಮುರಿದ ಧ್ವನಿಗೆ
ಹಾರಿದವು ಹಕ್ಕಿಗಳ ಹಿಂಡು
ಬೀಸಿ ಬೀಸಿ ಎಸೆದರು
ಗಾಳ ನಡುವಳೆಗೆ
ಠಕ್ಕನಂತೆ ಕುಳಿತ
ವಾಗರಿಕ ಮರೆಗೆ
ರಿಣ ಮುಗಿದ ಜಲಚರ
ಹೆಣ ವಾದವು
ವಾಗರಿಕನ ಎದೆಯಲ್ಲಿ
ಗೆಲುವಿನ ನಗೆ ಯಾದವು