ಅಚಲ ಬಿ ಹೆನ್ಲಿ ಅವರು ಬರೆದ ಮಕ್ಕಳ ಎರಡು ಕವಿತೆಗಳು

1 ಪುಟ್ಟನ ಆಲೋಚನೆ

ಪುಟ್ಟ ಕಂದ ಗೀರಿದ ಗೋಡೆಯ
ಮೇಲೊಂದು ಉದ್ದವಾದ ಗೆರೆ
ಅಮ್ಮ ಬಂದೇಟಿಗೆ ಜಾಗ ಕಿತ್ತ ಮೆಲ್ಲನೇ…!
ಬಂದು ನೋಡಲು ಅಮ್ಮ ಕಂದನ ರಚನೆ
ಕಲ್ಲಂತೆ ನಿಂತುಬಿಟ್ಟಳು ಹಾಗೇ ಸುಮ್ಮನೆ…!

ಸಿಟ್ಟಾದ ಅಮ್ಮ ಕರೆದಳು “ಚಿನ್ನಾ ಬಾ ಬೇಗನೇ”
ಖುಷಿಯಾದ ಕಂದ ಓಡೋಡಿ ಬಂದು ಕೇಳಿದ,
“ಅಮ್ಮ ಏಕೆ ನನ್ನನ್ನು ಕರೆದೆ..?”
ಕಂದನ ಜುಟ್ಟು ಕೈಗೆ ಸಿಕ್ಕು ಹೇಳಿದಳಾಕೆ,
“ತಡೆಯೋ ಪುಟ್ಟ ಇಗೋ ಬಂದೆ..!”

ಬದಲಾದ ಹೆಸರಿನಲ್ಲೇ ಗುರುತಿಸಿಬಿಟ್ಟ
ಪುಟ್ಟ, ಅಮ್ಮನ ಭಾವನೆ…?
ಅದಕ್ಕೇ ಅಲ್ಲವೇ ಹೇಳುವುದು
ನಮ್ಮ ಪುಟ್ಟ ತುಂಟನಾದರೂ ಬಲು ಜಾಣನೇ..!

ಹೇಗಾದರೂ ಸರಿಯೇ,
ಅಮ್ಮನ ಏಟು ತಪ್ಪಿಸುವುದಷ್ಟೇ
ಪುಟ್ಟನ ಯೋಜನೆ…?
ಅಮ್ಮನಿಗೆ ಎತ್ತಿಕೊಳ್ಳಲು ಹೇಳಿ,
ಅವಳನ್ನು ಮುದ್ದುಗರೆಯುವುದೊಂದೇ
ಅವನಿಗೆ ಬಂದ ಸುಂದರವಾದ ಆಲೋಚನೆ..!!

2 ಅಮ್ಮನ ಲಂಚ

ಪುಟ್ಟನ ಹದ್ದು ಬಸ್ತಿನಲ್ಲಿ ಇಡೋಕೆ
ಪ್ರತಿ ದಿನವೂ ಅಮ್ಮ ಕೊಡಲೇಬೇಕಂತೆ,
ಸಿಹಿಯಾದ ಲಂಚ..!

ಕೊಡುವುದು, ತೆಗೆದುಕೊಳ್ಳುವುದು ತಪ್ಪು
ಎಂದು ಗೊತ್ತಿದ್ದರೂ
ಮತ್ತದೇ ಪುನರಾವರ್ತನೆ ಆಗುತ್ತಿದೆಯಲ್ಲ!

ಪುಟ್ಟನ ತರಲೆ ತುಂಟಾಟವನ್ನ
ಹತೋಟಿಯಲ್ಲಿ ಇಡಲು,
ಅಮ್ಮ ಆಗಾಗ ಕೊಡಬೇಕಂತೆ ಕೇಕು,
ಚಾಕಲೇಟು, ಬ್ರೆಡ್ಡು, ಬನ್ನುಗಳನ್ನ!

ಈಗೀಗ ಪುಟ್ಟ ಕೇಳುತ್ತಾನೆ
ಓದು ಬರವಣಿಗೆ ಮಾಡುವುದಕ್ಕೂ,
ಕುರುಕಲು ಲಂಚವನ್ನ!

ಗೊಣಗುತ್ತಾಳೆ ಅಮ್ಮ,
ಈ ಪುಟ್ಟನಿಗೆ ಯಾಕಾದರೂ
ಮಾಡಿಸಿದೆ ಇಂಥ ಅಭ್ಯಾಸವನ್ನ!

ಇತ್ತೀಚಿಗೇಕೋ ಪುಟ್ಟ
ಕೇಳುತ್ತಾನೆ ಮತ್ತೊಂದು ಲಂಚವನ್ನ
ಮಲಗಿ ನಿದ್ರಿಸಬೇಕೆಂದರೆ,
ಕೊಡಲೇಬೇಕಂತೆ
ಅರ್ಧ ಗಂಟೆ ಮೊಬೈಲ್ ಫೋನನ್ನ!

ಸಿಟ್ಟಾದ ಅಮ್ಮ
ಕಂಡುಕೊಂಡಳು ಉಪಾಯವೊಂದನ್ನ,
ಮೆಲ್ಲಗೆ ಹಾಕಿಟ್ಟಳು
ಮೊಬೈಲಿಗೆ ಪಾಸ್ವರ್ಡ್ ಒಂದನ್ನ!
ಜೊತೆಗೆ ಬೀರುವಿಗೆ ಸಾಗಿಸಿದಳು
ತಿಂಡಿಯ ಡಬ್ಬಿಗಳನ್ನ!

ಇದ್ಯಾವುದರ ಬಗ್ಗೆಯೂ ಗೊತ್ತಿಲ್ಲದ ಪುಟ್ಟ,
ಮತ್ತೆ ಶುರುಮಾಡಿದ ಹಳೆಯ ವರಸೆಯನ್ನ..!

ಕೇಳಿದ ಸಿಹಿ ಲಂಚಕ್ಕೆ ಮತ್ತು ಮೊಬೈಲಿಗೆ,
ಅಮ್ಮ ಜಗ್ಗದೇ ಕೊಡದಿದ್ದಾಗ,
ಅಂತೂ ಹಿಡಿದ ಒಳ್ಳೆಯ ದಾರಿಯನ್ನ…!

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಮಿಂಚುಳ್ಳಿ ಸಾಹಿತ್ಯ ಪತ್ರಿಕೆ
16 June 2023 09:50

ಆಸಕ್ತರು ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ವಾಟ್ಸಾಪ್ ಗುಂಪನ್ನು ಸೇರಬಹುದು.
https://chat.whatsapp.com/KL90U4wqSPAF01iRxqfcgm

0
    0
    Your Cart
    Your cart is emptyReturn to Shop