ದಾವಲಸಾಬ ನರಗುಂದ ಅವರು ಬರೆದ ಕವಿತೆ ‘ಅಪ್ಪ ಈಗೀಗ ಮೌನಿಯಾಗಿದ್ದಾನೆ’

ಈಗೀಗ ಅಪ್ಪ
ಮೌನವನ್ನು ಹೊದ್ದುಕೊಂಡು
ಧ್ಯಾನಿಯಾಗಿದ್ದಾನೆ
ಥೇಟ್ ಬುದ್ದನಂತೆ
ನೊಂದ ಬೆಂದ ಕಥೆಗಳನ್ನೆಲ್ಲಾ
ತನ್ನೊಡಲ ಮನೆಯಲಿ
ಕಾಪಿಟ್ಟುಕೊಂಡು ಮುಗುಳ್ನಗುತಿರುವನು

ಮೊದಲೆಲ್ಲಾ ಹಾದಿ ತಪ್ಪಿ ನಡೆದರೆ
ಬೈಯ್ಯುತ್ತಿದ್ದ ಬೆದರಿಸುತ್ತಿದ್ದ
ಸಾಧನೆಯ ಹಾದಿ ತುಳಿ ಎನ್ನುತ್ತಿದ್ದ
ಬೆನ್ಮ ಹಿಂದಿನ ಬೆಳಕಾಗಿ
ನೀರನೆರಳಿನಂತೆ ಜತೆ ನಿಲ್ಲುತ್ತಿದ್ದ

ಪ್ರೋತ್ಸಾಹದ ಬೆನ್ನು ಚಪ್ಪರಿಸಿ
ತನ್ನ ಕನಸಿನ ಗೋಪುರವನು
ಭರವಸೆಯ ಗೋಡೆಯನು
ಮಗನಲಿ ಕಟ್ಟಿ
ಓದಲೇಬೇಕೆಂದು ಎಂದೂ ಗದರಿಸಲಿಲ್ಲ

ನೆಚ್ಚಿದ ನೆಲಕೆ ಬೆವರು ಹರಿಸಿ
ಸಾಧನೆಗೆ ಸಾತ್ ನೀಡಿದ
ಅಪ್ಪ ಈಗೀಗ ಮೌನಿಯಾಗಿದ್ದಾನೆ.

ಚಂದಾದಾರರಾಗಿ
ವಿಭಾಗ
9 ಪ್ರತಿಕ್ರಿಯೆಗಳು
Inline Feedbacks
View all comments
Saiyadali
15 June 2025 21:15

Super sir

ಸಂದೇಶ ಸಂತೋಷ ಬಿಲೇಕರ
15 June 2025 10:25

ತಂದೆಯ ಮಹಿಮೆಯನ್ನು ತುಂಬಾ ಸುಂದರವಾಗಿ ನಿರೂಪಿಸಿದ್ದೀರಾ ಸರ್. ಅರ್ಥಾತ್, ನಿಮ್ಮ ವಿವರಣೆ ಎಲ್ಲರ ಹೃದಯವನ್ನೂ ಸ್ಪರ್ಶಿಸುವಂತಿದೆ.
🤝 ಸರ್.

Pruthwi Patil
15 June 2025 09:51

Chennagide sir👌

GURUPRASAD
15 June 2025 08:16

Super sir

Vijayakumari.B
12 October 2023 10:17

Poem is good

ಸವಿತಾ ಮುದ್ಗಲ್
10 October 2023 13:38

ಸೊಗಸಾಗಿದೆ ಕವನ 👌🏾

ದಾವಲಸಾಬ ನರಗುಂದ
10 October 2023 12:39

ನನ್ನ ಕವಿತೆ ಪ್ರಕಟಿಸಿದ ಮಿಂಚುಳ್ಳಿ ಬಳಗಕ್ಕೆ ತುಂಬಾ ಧನ್ಯವಾದಗಳು

Nirmala kumari
10 October 2023 11:51

👌😇🙏

ದಾವಲಸಾಬ ನರಗುಂದ
10 October 2023 12:40
Reply to  Nirmala kumari

ಧನ್ಯವಾದಗಳು ಮೇಡಂ

0
    0
    Your Cart
    Your cart is emptyReturn to Shop