ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ್ ಅವರೊಂದಿಗೆ ಮಿಂಚುಳ್ಳಿ ವಿಶೇಷ  ಸಂದರ್ಶನ

ಸಂದರ್ಶನ: ಸೂರ್ಯಕೀರ್ತಿ

ಎಚ್.ಎಸ್.ಶಿವಪ್ರಕಾಶ್ ಬದುಕು-ಬರೆಹ:
ಪೂರ್ಣ ಹೆಸರು: ಹುಲಕುಂಟೇಮಠ ಶಿವಮೂರ್ತಿ ಶಾಸ್ತ್ರಿ ಶಿವಪ್ರಕಾಶ
ವೃತ್ತಿ: ಕವಿ, ಸಂಪಾದಕ, ಅನುವಾದಕ, ಪ್ರೊಫೆಸರ್, ಬರ್ಲಿನ್ ನ ಟಾಗೋರ್ ಕೇಂದ್ರದ ಮಾಜಿ ನಿರ್ದೇಶಕ
ಆತ್ಮ ಚರಿತ್ರೆ: ಬತ್ತೀಸ ರಾಗ.

ಹುಲಕುಂಟೆಮಠ ಶಿವಮೂರ್ತಿ ಶಾಸ್ತ್ರಿ ಶಿವಪ್ರಕಾಶ್ ಕನ್ನಡದಲ್ಲಿ ಒಬ್ಬ ಪ್ರಮುಖ ಕವಿ ಮತ್ತು ನಾಟಕಕಾರ.ಅವರು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಲಾ ಮತ್ತು ಸೌಂದರ್ಯಶಾಸ್ತ್ರ ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದವರು. ಇವರು ಬರ್ಲಿನ್ ನಲ್ಲಿರುವ ಭಾರತೀಯ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ನಡೆಸುತ್ತಿರುವ ಟಾಗೋರ್ ಸೆಂಟರ್ ಎಂಬ ಹೆಸರಿನ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿದ್ದರು. ಶಿವಪ್ರಕಾಶ್ ಜೂನ್ 1954 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಶಿವಮೂರ್ತಿ ಶಾಸ್ತ್ರಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಪಡೆದ ನಂತರ, ಶಿವಪ್ರಕಾಶ್ ಕರ್ನಾಟಕ ಸರ್ಕಾರಿ ಸೇವೆಗೆ ಇಂಗ್ಲಿಷ್ ಉಪನ್ಯಾಸಕರಾಗಿ ಸೇರಿದರು ಮತ್ತು ಬೆಂಗಳೂರು ಮತ್ತು ತುಮಕೂರುಗಳ ವಿವಿಧ ಕಾಲೇಜುಗಳಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು. 1996 ರಲ್ಲಿ ಅವರು ನವದೆಹಲಿಯ ಸಾಹಿತ್ಯ ಅಕಾಡೆಮಿಯ ಜರ್ನಲ್ ಆಫ್ ಇಂಡಿಯನ್ ಲಿಟರೇಚರ್ನ ಸಂಪಾದಕರಾಗಿ ನೇಮಕಗೊಂಡಿದ್ದರು. ಶಿವಪ್ರಕಾಶ್ ಅವರು 1977ರಲ್ಲಿ ತಮ್ಮ ಮೊದಲ ಕವನಗಳ ಮಿಲರೆಪವನ್ನು ತಮ್ಮ 23 ನೇ ವಯಸ್ಸಿನಲ್ಲಿ ಪ್ರಕಟಿಸಿದರು. ಇದು ಕನ್ನಡ ಕವಿತೆಯಲ್ಲಿ ಹೊಸ ಧ್ವನಿಯಾಗಿ ಗುರುತಿಸಲ್ಪಟ್ಟಿತು. ಆದರೆ ಶಿವಪ್ರಕಾಶ್ 1983 ರಲ್ಲಿ ಅವರ ಎರಡನೇ ಸಂಕಲನ “ಮಳೆಬಿದ್ದ ನೆಲದಲ್ಲಿ” ಪ್ರಕಟಣೆಯಿಂದ ಜನಪ್ರಿಯತೆ ಮತ್ತು ಮೆಚ್ಚುಗೆಯನ್ನು ಪಡೆದರು. ಶಿವಪ್ರಕಾಶ್ 1986 ರಲ್ಲಿ ಅವರ ಮೊದಲ ನಾಟಕ ಮಹಾಚೈತ್ರವನ್ನು ಪ್ರಕಟಿಸಿದರು.

ಹಿರಿಯ ಕವಿ ಎಚ್.ಎಸ್.ಶಿವಪ್ರಕಾಶ್ ಅವರೊಂದಿಗೆ ಸಂದರ್ಶಕ ಕವಿ ಸೂರ್ಯಕೀರ್ತಿ

1. ನಿಮ್ಮ ಬಾಲ್ಯ ಜೀವನದ ಬಗ್ಗೆ ಹೇಳುವುದಾದರೆ?

ನನ್ನ ಕಾವ್ಯ ಪ್ರೀತಿಯ ತಾಯಿಯ ಪ್ರಭಾವ ಬಹಳ ಮುಖ್ಯವಾಗಿತ್ತು.ಆಕೆಯಿಂದ ಮಾರ್ದವತೆಯನನ್ನು ಕಲಿತೆ. ನನ್ನ ಅಜ್ಜಿಯಿಂದ ಗಟ್ಟಿನಾಗುವುದನ್ನು ಕಲಿತೆ.  ಬೈಗುಳ, ಕಟಕಿಗಳನ್ನು ಕಲಿತೆ. ನನ್ನ ವಾತಾವರಣದಿಂದ ಬಹುಭಾಷಿಕತೆಯನ್ನು ಕಲಿತೆ. ನಮ್ಮ ಮನೆ ಹಿತ್ತಲ ಪ್ರಪಂಚದ ಬಾಳೆಗಿಡ, ಅದರ ಬುಡವನ್ನು  ಹುಡುಕುತ್ತಾ ಬಂದು ಹೆದರಿಕೆ ಹುಟ್ಚಿಸುತ್ತಾ ಹೋದ ನಾಗರ ಹಾವು, ತೆಂಗಿನ ಮರದ ಮೇಲೆ ಮೂರು ತಿಂಗಳು ಝಾಂಡಾ ಹೂಡಿ ಇರುಳಿಡೀ ಘೂಕರಿಸಿದ ಗೂಬೆ, ವಿಶಾಲ ಸಂಪಿಗೆ ಮರದ ಮೇಲೆ ಬೆಳಗು ಬೈಗು ತೂಗುತ್ತಿದ್ದ ಗುಬ್ಬಚ್ಚಿ ಹಿಂಡು, ಕಾಗೆಗಳ ದಂಡು, ಅಬ್ಬೇಪಾರಿ ಗುಬ್ಬಚ್ಚಿಗಳನ್ನು ಶಿಕಾರಿ ಮಾಡಲು ಬರುತ್ತಿದ್ದ ಕಳ್ಶಬೆಕ್ಕು, ಮರದ ಕಾಂಡದಲ್ಲಿ ಕೊಳಕು ಕಂಬಳಿ ಹುಳ ಮೊದಲಾಗಿ, ಆಮೇಲೆ ತಾಪಸಿಯ ಹಾಗೆ ಗೂಡುಕಟ್ಟಿ ರೆಕ್ಕೆ ಪಡೆದು ಹಾರಿಹೋಗುತ್ತಿದ್ದ ಚಿಟ್ಟೆ.. ಹೀಗಿತ್ತು ನನ್ನ ಬಾಲ್ಯದ ಜಗತ್ತು. ಈ ಎಲ್ಲವೂ  ಕಲಿಸಿದ ಪಾಠ ಶಬ್ದಗಳಾಚೆಗಿನದು, ಬುಧ್ಧಿಗಿಂತಾ ಈಚೆಗಿನದು.

2. ಸಾಹಿತ್ಯದ ಬಗ್ಗೆ ಒಲವು ಬರಲು ಯಾರು ಸ್ಪೂರ್ತಿ ?

ಹಾಡು ಕಲಿಸಿದ ತಾಯಿ, ಕತೆ ಹೇಳುತ್ತಿದ್ದ ಅಜ್ಜಿ, ಗುಬ್ಬಚ್ಚಿ, ಗೂಬೆ, ಸಾಯುವಾಗಲೂ ಹೂ ಬಿಡುತ್ತಿದ್ದ ಪಾರಿಜಾತ ಮರ.

3. ಸಾಹಿತ್ಯ ಮತ್ತು ಜೀವನ ವಿಭಿನ್ನವೇ ?

ಬದುಕು ಬರಹ ಬೇರೆಯೂ ಹೌದು, ಒಂದೇ ಹೌದು, ನೀಲಾಕಾಶ ಮತ್ತು ಬೆಳಕಿನ ಹಾಗೆ.

4. ನಿಮ್ಮ ಜೀವನದಲ್ಲಿ ಮರೆಯಲಾಗದ ನೆನಪು ?

ಅವಿಸ್ಮರಣೀಯ ಕೃತಿಗಳನ್ನು ರಚಿಸುವುದು

5. ನಿಮ್ಮ ಪ್ರಕಾರ ಕನ್ನಡ ಅಂದ್ರೆ ?

ನಾವೆಲ್ಲಾ ಆಡುವ, ಭಾವಿಸುವ ನುಡಿ.

6. ಪ್ರಸ್ತುತ ಕನ್ನಡ ಸಾಹಿತ್ಯ ಬೆಳವಣಿಗೆಯ ಬಗ್ಗೆ ನಿಮ್ಮ ಅನಿಸಿಕೆ?

ವಿಮರ್ಶಕರನ್ನು ಕೇಳಿ.

        ಶಿವರಾಮ ಕಾರಂತ ಪ್ರಶಸ್ತಿಯ ಸಂದರ್ಭ

7. ನಿಮ್ಮ ಮುಂದಿನ ಸಾಹಿತ್ಯ ಕೃತಿ ?

ಗೊತ್ತಿಲ್ಲ.

8. ನಿಮ್ಮ ಕುಟುಂಬದ ಬಗ್ಗೆ ಹೇಳುವುದಾದರೆ ?

ಮೊದಲ ಪ್ರೆಶ್ನೆಗೆ ಉತ್ತರ ನೋಡಿ.

9. ನಿಮ್ಮ ಸಾಹಿತ್ಯ ಕೃಷಿ ನಡೆದು ಬಂದ ದಾರಿ.

ನನ್ನ ಬದುಕು ನಡೆಯಲಾರದ ದಾರಿ.

10. ನಿಮ್ಮ ಜೀವನದ ಅಪರೂಪದ ಚಿತ್ರಗಳು.

ಬೆಟ್ಟ, ಗುಡ್ಡ, ಗವಿ, ಗುಂಡಾರ, ನದಿ ದಂಡೆ, ಕೆರೆಯ ಬದಿ, ಬೆಳ್ಳಕ್ಕಿ-ಇಂಥವು ಮನದಲ್ಲಿ ರೇಖಿಸಿದ ಚಿತ್ರಗಳು, ಮೂಡಿಸಿದ ಲಯಗಳು ನನ್ನ ಬಗೆಯಾಳದಲ್ಲಿ ತಾಳಿದ ರೂಹುಗಳು.

ಇದುವರೆಗಿನ ಇವರ ಕೃತಿಗಳು

ಕವಿತೆಗಳು

ಮಿಲೆರೆಪಾ
ಮಳೆಬಿದ್ದ ನೆಲದಲ್ಲಿ
ಅನುಕ್ಷಣ ಚರಿತೆ
ಸೂರ್ಯಜಲ
ಮಳೆಯ ಮಂಟಪ
ಮತ್ತೆ ಮತ್ತೆ
ಮಬ್ಬಿನ ಹಾಗೆ ಕಣಿವೆ ಹಾಸಿ.
ಮರುರೂಪಗಳು. (ವಿವಿಧ ಭಾಷೆಗಳ ಕವಿತೆಗಳು ಕನ್ನಡ ಭಾಷೆಗೆ ಅನುವಾದ)
ನನ್ನ ಮೈನಾಗಾರ (ಕೆ. ಸಚ್ಚಿದಾನಂದನ್ರ ಮಲಯಾಳಂ ಕವಿತೆಗಳ ಕನ್ನಡ ಅನುವಾದ)
ನವಿಲು ನಾಗರಾ (ಅವರ ನಾಟಕಗಳ ಹಾಡುಗಳು)
ಮಾತು ಮಂತ್ರವಾಗುವವರೆಗೆ
ಮರೆತುಹೋದ ಡೊಂಬರಾಕೆ (ಜಿಂಗೊನಿಯ ಝಿಂಗೊನ್ರಿಂದ ಸ್ಪ್ಯಾನಿಷ್ ಪದ್ಯಗಳ ಕನ್ನಡ ಅನುವಾದ)
ಕವಿತೆ ಇಂದಿನವರೆಗೆ (ಕವನ ಸಂಗ್ರಹ)
ಆಟಂ ವೇಸ್ (ಇಂಗ್ಲಿಷ್ ಹೈಕು)
ಮಾಗಿಪರ್ವ (ಕನ್ನಡ ಹೈಕು)
ಐ ಕೀಪ್ ವಿಜಿಲ್ ಆಫ್ ರುದ್ರ (ಕನ್ನಡ ವಚನಗಳ ಇಂಗ್ಲೀಷ್ ಭಾಷಾಂತರ)

ನಾಟಕಗಳು

ಮಹಾಚೈತ್ರ
ಸುಲ್ತಾನ್ ಟಿಪ್ಪು
ಷೇಕ್ಸ್ಪಿಯರ್ ಸ್ವಪ್ನನೌಕೆ
ಮಂಟೇಸ್ವಾಮಿ ಕಥಪ್ರಸಂಗ
ಮಾದಾರಿ ಮಾದಯ್ಯ
ಮಧುರೆಕಾಂಡ
ಮಾಧವಿ
ಮಾತೃಕಾ
ಮಕರಚಂದ್ರ
ಸತಿ
ಚಸ್ಸಂದ್ರ
ಮದುವೆ ಹೆಣ್ಣು
ಕಿಂಗ್ ಲಿಯರ್ (ಶೇಕ್ಸ್ಪಿಯರ್ನ ನಾಟಕದ ಕನ್ನಡ ಅನುವಾದ)
ಮಾರನಾಯಕನ ದೃಷ್ಟಾಂತ (ಮ್ಯಾಕ್ಬೆತ್ನ ಕನ್ನಡ ರೂಪಾಂತರ)
ಮಲ್ಲಮ್ಮನ ಮನೆ ಹೋಟ್ಲು (ಫೆಡೆರಿಕೊ ಗಾರ್ಸಿಯಾ ಲೋರ್ಕಾದ ದಿ ಶೂಮೇಕರ್ಸ್ ಪ್ರಾಡಿಜಿಯಸ್ ವೈಫ್ನ ಕನ್ನಡ ರೂಪಾಂತರ)
ನಾಟಕ ಇಲ್ಲಿಯವರೆಗೆ 2011 (ನಾಟಕಸಂಗ್ರಹ)
ಇತರೆ
ಸಾಹಿತ್ಯ ಮತ್ತು ರಂಗಭೂಮಿ (ಸಾಹಿತ್ಯ ಮತ್ತು ರಂಗಭೂಮಿಯ ಕುರಿತಾದ ಒಂದು ಗ್ರಂಥಸೂಚಿ)
ಮೊದಲ ಕಟ್ಟಿನ ಗದ್ಯ (ಪ್ರಬಂಧಗಳ ಸಂಗ್ರಹ)
ಯುಗಾಂತ (ಇರಾವತಿ ಕರ್ವ್ನ ಅದೇ ಹೆಸರಿನ ಪುಸ್ತಕದ ಕನ್ನಡ ಅನುವಾದ)

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop