ನಾನಂದುಕೊಂಡೆ,
ದೀಪ ಬೆಳಕಿನ ಸಂಕೇತ
ಕತ್ತಲದರ ವಿರೋಧಿಯಂತೆ.
ನಾನಂದುಕೊಂಡೆ,
ದೀಪ ದಾರಿ ತೋರುವ ಮಿಂಚು
ಕಣ್ಣು ಕಟ್ಟುವ ಪರದೆಯಲ್ಲ
ನಾನಂದುಕೊಂಡೆ,
ದೀಪ ಪತಂಗಗಳ ಸೆಳೆಯುವ ಅಪ್ಸರೆ
ಸುಡುವ ಸಿಡಿಲಲ್ಲ
ನಾನಂದುಕೊಂಡೆ,
ದೀಪ ಜ್ಞಾನದ ಚೈತನ್ಯ
ಅಜ್ಞಾನದ ಪರಮಾವಧಿಯಲ್ಲ
ನಾನಂದುಕೊಂಡೆ,
ಎಲ್ಲವೂ ನಿಜವಾಗುತ್ತಿದೆ
ಏಷ್ಟು ಚಂದ ಅಲ್ಲವೇ?
ಆದರೆ ಮನಸ್ಸು ಎಚ್ಚರಿಸಿತು
ದೀಪದ ಬುಡ ಎಂದಿಗೂ ಕತ್ತಲಲ್ಲವೆ?