ಇಂದು ಹೊಸ ದಿನ
ತಂದ ಸೂರ್ಯನು
ಹೊಂಬೆಳಕಿನಲಿ
ರಥವೇರಿ ಬಂದ
ಹಕ್ಕಿಗಳು ಹಾಡಿದವು
ನವಿಲುಗಳು ನರ್ತಿಸಿದವು
ಕಾಡು ಕಣಿವೆಗಳಿಂದ
ತಂಗಾಳಿ ಬೀಸಿ ಬಂದವು
ಮಿಂದು ಮಡಿಯಲ್ಲಿ
ಮನೆ ಮುಂದೆ ರಂಗೋಲಿ
ಅರಳಿದವು ಹೆಂಗಳೆಯರ
ಎಳೆ ಬೆರಳುಗಳಿಂದ
ಗಂಧ ಕರ್ಪೂರದ
ಘಮಲು ಮನೆ ಮನೆಯ
ಮನ ಮನದ ಅಂಗಳಕೆ
ಸುಳಿ ಸುಳಿದು ಸುವಾಸನೆ
ಬೀರಿದವು
ಮಕ್ಕಳೆಲ್ಲರೂ ಕಿಲಕಿಲ
ಮುದ್ದು ಮಾತುಗಳನ್ನಾಡುತ್ತಾ
ಮನೆಮಂದಿಯ ಮನದೊಳಗೆ
ಮುತ್ತುಗಳ ಚೆಲ್ಲಿದರು
ಮಾವು ಬೇವುಗಳು
ನಲಿವು ನೋವುಗಳ
ತೋರಣವಾಗಿ ತಲೆ ಬಾಗಿಲಲ್ಲಿ
ಕೂಗಿ ಹೇಳಿದೆವು
ಇಂದು ಹೊಸ ದಿನ ಎಂದು!