ಮದುವೆ
————-
ಒಪ್ಪಿ
ಮದುವೆಯಾದವರಿಗಿಂತಲೂ
ತಪ್ಪಿ
ಮದುವೆಯಾದವರೆ ಜಾಸ್ತಿ !!
ಸಂತೋಷ
————
ಬಟ್ಟೆಯನು
ಕೊಂಡಂತೆ
ಅರಿವೆಯಂಗಡಿಯಲಿ
ಸಂತೋಷ
ಕೊಳ್ಳಲಾಗದು !!
ಪ್ರೋತ್ಸಾಹ
—————
ನೀವು
ನೀಡುವ
ಪ್ರೋತ್ಸಾಹ
ಸಾವಿರ ಪಟ್ಟು
ಇಮ್ಮಡಿ ಉತ್ಸಾಹ !!
ಮೊಬೈಲ್
————
ಬೆರಳ
ತುದಿಯಲ್ಲೇ
ಜಗತ್ತು
ಹಗಲಿರುಳೆನ್ನದೇ
ಅದನ್ನು
ಒತ್ತು !!
ಮನಸ್ಸು
————
ಹರಿದ
ಹಾಳೆಗಳನ್ನು
ಒಂದುಗೂಡಿಸಲಾಗದು !
ಒಡೆದ
ಮನಸ್ಸು ಕೂಡಾ
ಹಾಗೆಯೆ !!
ಕವಿ ಪ್ರೊ. ಸಿದ್ದು ಸಾವಳಸಂಗ
ಹಿರಿಯ ಕನ್ನಡ ಉಪನ್ಯಾಸಕರು
ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು
ವಿಜಯಪುರ – 586101