ಬೇಸಿಗೆ ಕಾಲ ಕಷ್ಟ ಕಷ್ಟ
ಬಿಳಿ ಬಟ್ಟೆ ತೊಡಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ಬಹಳ ನೀರು ಕುಡಿಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ಹಿತಮಿತ ಊಟ ಉಣಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ತಲೆಗೆ ಟೋಪಿ ಹಾಕಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ನಿಂಬೆ ಪಾನಕ ಇರಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ಬಿಸಿಲಿಗೆ ಛತ್ರಿ ಹಿಡಿಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ಹಕ್ಕಿಗೆ ನೀರು ಇಡಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ಮರದ ನೆರಳಡಿ ಇರಬೇಕು
ಬೇಸಿಗೆ ಕಾಲ ಕಷ್ಟ ಕಷ್ಟ
ನೆರಳಿಗೆ ಮರಗಳ ನೆಡಬೇಕು..