ಯುವ ಕಥೆಗಾರ ಮಂಜುನಾಯಕ ಚಳ್ಳೂರು ಅವರ ‘ಫೂ ಮತ್ತು ಇತರ ಕಥೆಗಳು’ ಕಥಾ ಸಂಕಲನ ಆಯ್ಕೆ.
ಶ್ರುತಿ ಬಿ.ಆರ್. ಅವರ ಜೀರೋ ಬ್ಯಾಲೆನ್ಸ್, ನದೀಮ್ ಸನದಿ ಅವರ ‘ಹುಲಿಯ ನೆತ್ತಿಗೆ ನೆರಳು’, ಶಶಿ ತರೀಕೆರೆ ಅವರ ‘ಡುಮಿಂಗ’ ಕೃತಿಗಳು ಈ ಬಾರಿ ಸೇರಿದಂತೆ, ಕಳೆದ ಬಾರಿಯೂ ಕೊನೆಯ ಹಂತಕ್ಕೆ ಆಯ್ಕೆಗೊಂಡಿದ್ದವು. ಉಳಿದಂತೆ ಅನಂತ ಕುಣಿಗಲ್ ಅವರ ‘ರೌದ್ರಾವತಾರಂ’, ಅನಿಲ್ ಗುನ್ನಾಪುರ ಅವರ ‘ಕಲ್ಲು ಹೂವಿನ ನೆರಳು’. ಚಾಂದ್ ಪಾಷ ಅವರ ‘ಚಿತ್ರ ಚಿಗುರುವ ಹೊತ್ತು’, ಮೌಲ್ಯ ಸ್ವಾಮಿ ಅವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’, ಸಂತೋಷ್ ನಾಯ್ಕ್ ಅವರ ‘ಆರ್ಥ’ ಕೃತಿಯು ಸೇರಿದಂತೆ, ಈ ಬಾರಿ ಒಟ್ಟು ಒಂಬತ್ತು ಯುವ ಲೇಖಕರ ಕೃತಿಗಳು ೨೦೨೩ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವಪುರಸ್ಕಾರದ ಕೊನೆಯ ಹಂತಕ್ಕೆ ಆಯ್ಕೆಯಾಗಿದ್ದವು.
ಹಿರಿಯ ವಿಮರ್ಶಕರಾದ ಎಚ್ ಎಸ್ ರಾಘವೇಂದ್ರ ರಾವ್, ಡಾ.ಕೆ. ಮರುಳಸಿದ್ದಪ್ಪ ಮತ್ತು ಎಂ.ಆರ್. ಕಮಲ ಅವರು ಈ ಬಾರಿಯ ತೀರ್ಪುಗಾರರಾಗಿದ್ದರು.