ಶ್ರೀಪ್ರಿಯಾ ಅವರು ಬರೆದ ಕವಿತೆ ‘ಅರಿತೋ, ಅರಿಯದೋ’

ಅರಿತೋ ಅರಿಯದೋ ನಾ ಮಾಡಿದೆ ನಿನ್ನ ಸ್ನೇಹಾ
ತಿಳಿದೋ ತಿಳಿಯದೋ
ನನ್ನ ಕಣ್ಣಲ್ಲಿ ನೀ ಚಿತ್ರಿಸಿ ಬಿಟ್ಟೆ
ನಿನ್ನ ಒಲವ ನೇಹಾ
ಅದೇಕೋ ನಾ ಪ್ರತಿಕ್ಷಣ ಬಯಸಿರುವೆ ನಿನ್ನ ಸನಿಹ
ನನ್ನವರ ವಾತ್ಸಲ್ಯದ ಮಡಿಲಲ್ಲಿ ಬಂದಿಯಾಗಿದೆ ಈ ನನ್ನ ದೇಹ

ಕೊಂಚ ಕೊಂಚವೇ ಕುಂಚ ಬಣ್ಣ ಬಳಿವಂತೆ
ನೀ ಅವರಸಿದೆ ನನ್ನ ಕನಸಿನ ಬದುಕ
ನಾ ಕಟ್ಟಿನಿಂತೆ ಸಾವಿರಾರು ಕನಸ ಕನಕ
ನಾಳಿನ ನಮ್ಮಿಬ್ಬರ ಸಾಗುವ ದಾರಿಯಲ್ಲಿ
ಸವಿಯಲು ಒಂದಿಷ್ಟು ಸುಖದ ಕ್ಷಣವ ಕೊನೆತನಕ

ನನಗು ಆಸೆ ಇದೆ ನನ್ನ ಕನಸಿನ ರಾಜಕುಮಾರನ
ರಾಣಿಯಾಗಿ ಬದುಕಲು
ಆದರೇಕೋ ಈ ಜಾತಿ ನೀತಿ ಎಂಬಾ ಸಮಾಜದ ಕಟ್ಟಳೆ
ನನ್ನ ಕಟ್ಟಿ ಹಾಕುತ್ತಿದೆ ಇನಿಯ ನಿನ್ನ ನಾ ಸೇರಲು
ಬಿಡಿಸಿಕೊಳ್ಳಬಲ್ಲೆ ಈ ಅರ್ಥವಿಲ್ಲದ ಜಾತಿ ಸಂಕೋಲೆ
ಆದರೆ ನಾ ಹೇಗೆ ಕಡಿದು ಬರಲಿ ಗೆಳೆಯ ನನ್ನ
ಹೆತ್ತವರ ಪ್ರೀತಿ ನಂಬಿಕೆ ತುಂಬಿದ ಆಸರೆಯ ಬಲೆ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop