ಶ್ರೀಕಾಂತ ಮಡಿವಾಳ ಅವರು ಬರೆದ ಕವಿತೆ ‘ಮಳೆ-ಮನಸ್ಸು’

ಮನಸ್ಸಿನ ಗೂಡು ಮಳೆಯ ಹಾಡು
ಸಂದ್ಯಾಕಾಲದಿ ಸುರಿವ ಮಳೆ
ಹನಿ ಹನಿ ಜೋರಾಗಿ
ಅಲ್ಲೆಲ್ಲಾ ನೀರಿನ ತೋಡು

ಕಪ್ಪನೆಯ ಮುಗಿಲು
ಭಯಾನಕ ಸಿಡಿಲು-ದಿಗಿಲು
ಅಲ್ಲಲ್ಲಿ ಪ್ರೇಮ…? ಚಿತ್ತಾರ
ಪೂರ್ವ ದಿಗಂತದಲ್ಲಿ ಕಾಮನ ಬಿಲ್ಲಿಗೆ
ಸಪ್ತವರ್ಣ

ತೆOಕಣ ದಿಬ್ಬದಲ್ಲಿ
ದಿಕ್ಕೆಟ್ಟ ಗಾಳಿಯ ಪರದಾಟ
ಇಳಿಜಾರಿನ ಅಂಚು-ಅಲ್ಲೆನೊ ಸಂಚು
ಲಯವಿಲ್ಲ-ತಾಳವಿಲ್ಲ
ಒಂಟಿ ನವಿಲಿಗೆ ಅರೆಹುಚ್ಚು

ಹನಿ ಜಿನುಗಿನಲ್ಲಿ ಹಸಿಯಾಗಿದೆ
ಕಣ್ಣಂಚಿನ ಕನಸು
ಸುರಿವ ಮಳೆಗೆ ನವಿರಾಗಿದೆ ಮನಸು
ಈ ಮಳೆ – ಮನಸ್ಸು

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop