ಒಲೆಯ ಮೇಲಿರಿಸಿ
ಬೇಳೆಯ ಬೇಯಿಸುವ
ಪಾತ್ರೆಯೊಳಗಿನ
ಸಟ್ಟುಗದಂತೆ ನಾವು
ಈ ಬದುಕಲಿರಬೇಕು!
ಒಲೆಯ ಕೆಳಗಿರುವ
ಉರಿಗೆ, ಬೇಳೆಯು
ತಾ ಉಕ್ಕುವುದ
ತಡೆವ ಸಟ್ಟುಗದಂತೆ,
ಕೋಪದಿ ಕುದಿಯುವ
ಮನಗಳು ಉಕ್ಕದಂತೆ
ತಡೆವ ಸಟ್ಟುಗ
ನಾವಾಗ ಬೇಕು.
ಬೆಂದ ಬೇಳೆಯನು
ಸಂದ ಸಾರನ್ನು
ಬಳಗದ ಎಲ್ಲರಿಗೂ
ಮಮತೆಯಿಂದ ಹಂಚಿ
ಅವರ ಖುಷಿಯಲ್ಲಿಯೇ
ಸಂಭ್ರಮಿಸುವ ಸಟ್ಟುಗ
ನಾವಾಗಬೇಕು…!
ಹಾಗೆ ಬದುಕಬೇಕು…