ಸಾಲು ಮರವು ಸಾಲದಾಗಿದೆ
ನಾಕು ದಿಕ್ಕಿಗೂ
ಒಣಮರವೇ ಭಾಗವಾಗಿದೆ
ಹೆಜ್ಜೆ ಹೆಜ್ಜೆಗೂ
ಚಿಗುರ ಒಗರ ಸವಿದುಕೊಂಡು
ಲಾಲಿ ಹಾಡಿದೆ
ದೂರಮರದ ಸವಿಯನುಂಡು
ಬದುಕ ಎಣಿಸಿದೆ
ಟಿಸಿಲು ಒಡೆದು ಗೂಡಿಗೆಂದು
ಕೊಟ್ಟೆ ರಕ್ಷಣೆ
ಚಿಲಿಪಿಲಿಯ ಹಾಡಿಗೆಂದು
ಹಾಕಿದೆ ಮಣೆ
ಹಾರಲಾರೆ ದೂರವೆನಿತು
ಗರಿಯು ಹರಿದಿದೆ
ಹಾಡಲಾರೆ ರಾಗವೆನಿತು
ಕೊರಳು ಸೊರಗಿದೆ
ಮೂಡಬಲ್ಲದೇನು ಚಿಗುರು
ಮೋಡ ಜಿನುಗಿದೆ
ಟೊಂಗೆಯಲ್ಲು ಹಸಿರ ಕೆದರು
ಜೀವ ಕಾದಿದೆ.