ದಾವಲಸಾಬ ನರಗುಂದ ಅವರು ಬರೆದ ಕವಿತೆ ‘ಅಪ್ಪ ಈಗೀಗ ಮೌನಿಯಾಗಿದ್ದಾನೆ’

ಈಗೀಗ ಅಪ್ಪ
ಮೌನವನ್ನು ಹೊದ್ದುಕೊಂಡು
ಧ್ಯಾನಿಯಾಗಿದ್ದಾನೆ
ಥೇಟ್ ಬುದ್ದನಂತೆ
ನೊಂದ ಬೆಂದ ಕಥೆಗಳನ್ನೆಲ್ಲಾ
ತನ್ನೊಡಲ ಮನೆಯಲಿ
ಕಾಪಿಟ್ಟುಕೊಂಡು ಮುಗುಳ್ನಗುತಿರುವನು

ಮೊದಲೆಲ್ಲಾ ಹಾದಿ ತಪ್ಪಿ ನಡೆದರೆ
ಬೈಯ್ಯುತ್ತಿದ್ದ ಬೆದರಿಸುತ್ತಿದ್ದ
ಸಾಧನೆಯ ಹಾದಿ ತುಳಿ ಎನ್ನುತ್ತಿದ್ದ
ಬೆನ್ಮ ಹಿಂದಿನ ಬೆಳಕಾಗಿ
ನೀರನೆರಳಿನಂತೆ ಜತೆ ನಿಲ್ಲುತ್ತಿದ್ದ

ಪ್ರೋತ್ಸಾಹದ ಬೆನ್ನು ಚಪ್ಪರಿಸಿ
ತನ್ನ ಕನಸಿನ ಗೋಪುರವನು
ಭರವಸೆಯ ಗೋಡೆಯನು
ಮಗನಲಿ ಕಟ್ಟಿ
ಓದಲೇಬೇಕೆಂದು ಎಂದೂ ಗದರಿಸಲಿಲ್ಲ

ನೆಚ್ಚಿದ ನೆಲಕೆ ಬೆವರು ಹರಿಸಿ
ಸಾಧನೆಗೆ ಸಾತ್ ನೀಡಿದ
ಅಪ್ಪ ಈಗೀಗ ಮೌನಿಯಾಗಿದ್ದಾನೆ.

ಚಂದಾದಾರರಾಗಿ
ವಿಭಾಗ
18 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop