ಹೆಜ್ಜೆಯ ಜಾಡು ಹಿಡಿದು
ನೀ ನಡೆದು ಬಂದುಬಿಡು
ಅಲ್ಲಿ ನಿನಗಾಗಿ ಕಾದ
ಹೃದಯವೊಂದಿಹುದು
ಹೆಜ್ಜೆಯ ಗುರುತುಗಳೆಲ್ಲ
ಅಳಿಸಿ ಹೋಗುವ ಮುನ್ನ
ಸೇರಿಬಿಡು ಒಲವಿನೂರಿಗೆ
ಅಲ್ಲಿ ನಿನ್ನದೇ ಜಪವಿಹುದು
ನೀ ನಡೆವ ದಾರಿಯಲ್ಲಿ
ಹೆಜ್ಜೆ ಹೆಜ್ಜೆಗೂ ಹೂವಿನ
ಪರಿಮಳವ ಸಾರಿಸಿದ್ದೇನೆ
ಹೆಚ್ಚು ತ್ರಾಸಾಗದಿರಲೆಂದು
ನೀ ಬರುವ ಹಾದಿಯನ್ನೇ
ಎದುರು ನೋಡುವ ಹೃದಯಕ್ಕೆ
ನಿನ್ನ ಸೇರುವ ಬಯಕೆಯೊಂದೆ
ಹೆಮ್ಮರವಾಗಿಹುದು…