ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಕವಿತೆ ‘ಒಲವಿನ ಓಲೆ’

ಹದಿಹರೆಯದ ಬಯಕೆಗಳೇ
ಪ್ರೀತಿಯೆಂದರು ಕೆಲವರು
ಉಕ್ಕಿ ಬರುವ ಆಸೆಗಳೇ
ಕನಸುಗಳಿಗೆ ಪ್ರೇರಣೆಯೆಂದರು.

ಮುಸ್ಸಂಜೆಯ ಸೆಳೆತಕೆ ಮನಸೋತ
ಮನಸಿಗೆ ಸೋಕಿದ ಗಾಳಿಯೂ ನಿನ್ನದೇ
ಒಮ್ಮೆಯೂ ಕೇಳದ ‌ನಿನ್ನ ಧನಿಯ
ಕಲ್ಪಿಸಿದ ಭಾವನೆ ಪ್ರೀತಿಯಲ್ಲವೇ

ಯಾರೆಂದೂ ತಿಳಿಯದೇ ‌ಸೋತ ಹೃದಯ
ಪರವಶವಾಗಿದೆ ನಿನಗೇನೇ
ಅಕ್ಷರದಲ್ಲೇ ಕಾಣುವ ಕಾಳಜಿಗೆ
ಮಿಗಿಲಾದ ಪ್ರೀತಿ ಇರಬಹುದೇ ಸೃಷ್ಟಿಯೊಳಗೆ

ಪೋಣಿಸಿದ ಸಾಲುಗಳಲ್ಲಿ
ಭಾವನೆಗಳ ತೇಲಿಬಿಟ್ಟರೆ ಸಾಲದೇ
ಈ ಓಲವಿನೊಲೆಗೂ ಮಿಗಿಲಾಯಿತೇ
ಭೇಟಿಯ ಕಾತುರತೆ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop