ಅರವಿಂದ.ಜಿ.ಜೋಷಿ ಮೈಸೂರು ಅವರು ಬರೆದ ಕವಿತೆ ‘ನಗರವಾಸಿಗಳು ನಾವು’

ನಗರ ವಾಸಿಗಳು ನಾವು
ನಗೆಯನೇ ಮರೆತು
ಹೊಗೆಯನು ಸೇವಿಸುತ
ರೋಗಿಗಳಾಗಿ ಬದುಕುತಿಹೆವು ನಾವು.

ನಗರ ವಾಸಿಗಳು ನಾವು
ಹಗಲಿರುಳನೇ ಮರೆತು
ಹಣ ಗಳಿಕೆಯಲೇ ಬೆರೆತು
ಹಳವಿಸುತ ಬದುಕುತಿಹೆವು ನಾವು.

ನಗರ ವಾಸಿಗಳು ನಾವು
ನೆರೆಹೊರೆಯವರನು ಮರೆತು
ನನ್ನತ್ವದಲೇ ಕೊಳೆತು
ತೋರಿಕೆಗಾಗಿ ಬದುಕುತಿಹೆವು ನಾವು.

ನಗರ ವಾಸಿಗಳು ನಾವು
ಆಚರಣಿಗಳನು ಮರೆತು
ಆಡಂಬರಕೆಗೆ ನೇತಾಡುತ
ಆಯುಸ್ಸು ಸವೆಸುತಿಹೆವು ನಾವು

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
ಕಳಕಪ್ಪ ಜಲ್ಲಿಗೇರಿ ಹಿರೇವಡ್ಡಟ್ಟಿ
22 July 2023 06:10

ಚೆನ್ನಾಗಿದೆ ಸರ್ ಈ ನಿಮ್ಮ ಕವನ

0
    0
    Your Cart
    Your cart is emptyReturn to Shop