ಪ್ರಣಯದ ಎಳೆಗಳಿಂದ ವಿರಹವನ್ನೆಲ್ಲ ಕೂಡಿಸಿ ಹೆಣೆದು ಬಿಡು ಸಖಿ
ನಿನ್ನಧರದಿಂದ ಮದಿರೆಯ ನಶೆಯನ್ನೆಲ್ಲ ನನ್ನೆದುರು ಕುಡಿದು ಬಿಡು ಸಖಿ
ಸಂಜೆಯ ತಂಗಾಳಿಗೆ ಏನು ಗೊತ್ತು ನಿನ್ನ ಮೈ ಮನದ ಹಿತವಾದ ಸುಖ
ಗಾಳಿ ತಂಗಾಳಿಯನೆಲ್ಲ ಬಾಹು ಬಂಧನದಿ ಬಯಲೊಳಗೆ ಸಳೆದುಬಿಡು ಸಖಿ
ಮಾಗಿ ಚಳಿಗೆ ಬೆಚ್ಚಗಿನ ಹೊದಿಕೆ ನೀ ನನಗಾಗಿರಲು ನಡುಕ ನನಗೇಕೆ
ಬಿಸ್ತಾರದಿ ಪ್ರೇಮದ ರಸಧಾರೆ ಸ್ಖಲಿಸುವಂತೆ ಮಣಿದು ದಣಿದು ಬಿಡು ಸಖಿ
ಮನದ ರಂಗಸಜ್ಜಿಕೆ ಮೇಲೆ ಅಭೂತಪೂರ್ವ ಕಲ್ಪನೆಗೆ ನೂರು ಭಾವ ಬಣ್ಣ
ಮಂದಿರ ಮಸೀದಿ ನಾದ ಒಂದಾಗುವಂತೆ ಧರ್ಮ ಧಿಕ್ಕರಿಸಿ ಕುಣಿದು ಬಿಡು ಸಖಿ
ಗಂಡು ಹೆಣ್ಣೆoಬುದು ಅನಾದಿ ಕಾಲದ ಸೃಷ್ಟಿಯ ಕಣ್ಣೊಳಗಿನ ಸೊಬಗಿದು
ಮಾಗಿದ ಅಭಿಯ ಮೈಗೆ ಮೌನವಾಗಿ ಮಣಿದು ಸೇರಿಬಿಡು ಸಖಿ