ಆ ಕನಸು ಈ ದೀಪ ಇಲ್ಲಿಯೇ ಉರಿಯುತಿರಲಿ
ಪ್ರೀತಿಯ ಪ್ರಣಾಳಿಕೆಯಿದು ಇಲ್ಲಿಯೇ ಬಿಡುಗಡೆಗೊಳ್ಳಲಿ
ನೀನು ಸದಾ ಸಂಧಿಸುತಿರು ಬಿಸಿಲು ಕಿರಣಗಳನಪ್ಪಿ
ಮೋಡಮೇಣದ ಬತ್ತಿಯು ಹೀಗೆಯೇ ಬೇಳಗುತಿರಲಿ
ನಿನ್ನ ಕಾಲ್ಬೆರಳಿನ ಕಮಾನು ನೋವ ನೀಡಬಲ್ಲದು
ಪೂರ್ಣಚಂದ್ರನ ಪ್ರಖರತೆ ನೆತ್ತಿಯನು ಆಳಲಿ
ಗುಲಾಬಿ ಕೇಳಲು ಖಾಲಿ ಮನೆಗೆ ಹೋದರವರು
ತೆರೆಯದ ಬಾಗಿಲು ಕೂಡ ಭಿಕ್ಷುಕನ ಕೂಗು ಕೇಳಲಿ
ಕಾಡಿನಲಿ ಕಾಂಡಗಳು ತಳುಕಿನ ಪ್ರಣಯ ನಡೆಸಿವೆ
ಮನಸುಟ್ಟ ಜಾತಿಗಿಡಗಳಿಗೂ ಬದುಕಪಾಕ ಉಣಿಸಲಿ
ನೂರ್ ಜೇಡನ ಹಿಮಪದರ ಕೊಂಬೆಗೆ ಪ್ರೀತಿ ಬೆಸೆದಿದೆ
ಸೂಜಿಮನೆ ದೇಶಕೆ ಪೋಣಿಸುವ ಭಾವ ಮೂಡಲಿ