ಜಿ ಎಚ್ ನಾಯಕ ಎಂದೇ ಪ್ರಸಿದ್ಧರಾಗಿರುವ ಕನ್ನಡದ ಹಿರಿಯ ವಿಮರ್ಶಕ ಪ್ರೊ. ಗೋವಿಂದರಾಯ ಹಮ್ಮಣ್ಣ ನಾಯಕ ಇನ್ನಿಲ್ಲ.

1935 ಸೆಪ್ಟಂಬರ 18ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಆತ್ಮಕಥನ ‘ಬಾಳು’, ಇವರ ಪ್ರಬಂಧ ಸಂಕಲನ ‘ಉತ್ತರಾರ್ಧ’ಕ್ಕೆ 2014ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ನಿರಪೇಕ್ಷ ವಿಮರ್ಶಾ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿ. ನಿಜದನಿ ವಿಮರ್ಶಾ ಕೃತಿಗೆ ‘ವಿ.ಎಂ.ಇನಾಂದಾರ ಸ್ಮಾರಕ’ ಪ್ರಶಸ್ತಿ ಜಿ.ಎಚ್‌.ನಾಯಕ ಅವರಿಗೆ ಲಭಿಸಿವೆ.

ಇವರ ಪ್ರಮುಖ ಕೃತಿಗಳು
ಸಮಕಾಲೀನ (1973 ),
ಅನಿವಾರ್ಯ (1980),
ನಿರಪೇಕ್ಷೆ (1984),
ನಿಜದನಿ (1988),
ವಿನಯ ವಿಮರ್ಶೆ (1991),
ಸಕಾಲಿಕ (1995),
ಗುಣ ಗೌರವ (2002),
ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002),
ಕೃತಿ ಸಾಕ್ಷಿ (2006),
ಸ್ಥಿತಿ ಪ್ರಜ್ಞೆ (2007),
ಮತ್ತೆ ಮತ್ತೆ ಪಂಪ (2008),
ಸಾಹಿತ್ಯ ಸಮೀಕ್ಷೆ (2009) ಮತ್ತು
ಉತ್ತರಾರ್ಧ (2011)

0
    0
    Your Cart
    Your cart is emptyReturn to Shop