ಕುಪ್ಪಳಿಯಲ್ಲಿ ನಡೆದ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2024 ಫೋಟೋ ಆಲ್ಬಮ್

ಸಾಹಿತ್ಯದ ಓದು, ಶ್ರದ್ಧೆ, ಶಿಸ್ತು, ಸಂಯಮ ಮತ್ತು ಸಂವಾದ ನಮ್ಮನ್ನು ಮತ್ತೆ ಮತ್ತೆ ಪೊರೆಯುತ್ತವೆ.

ಮೊದಲ ಕಮ್ಮಟದ ಅಭಿಪ್ರಾಯದಿಂದಾಗಿ ಈ ಬಾರಿ ಬಂದ ಅರ್ಜಿಗಳ ಸಂಖ್ಯೆಯು ಹೆಚ್ಚಿತ್ತು. ವಿಶೇಷವಾಗಿ ಈ ಬಾರಿ ಉತ್ತರ ಕರ್ನಾಟಕ ಭಾಗದ ಗೆಳೆಯರು ಅತಿ ಹೆಚ್ಚು ಇದ್ದರು. ಒಟ್ಟಾರೆಯಾಗಿ ಕರ್ನಾಟಕದ ಎಲ್ಲಾ ಭಾಗದ ಗೆಳೆಯರು ಇದ್ದರು. ಪರಸ್ಪರ ಸಹಕಾರ, ಗೌರವ ಮತ್ತು ಪ್ರೀತಿ ಕೂಡ ನಮ್ಮನ್ನು ಮತ್ತೆ ಮತ್ತೆ ಪೊರೆಯುತ್ತವೆ.

ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳ ಸಹಕಾರದಿಂದಾಗಿ ಕುಪ್ಪಳಿಯಲ್ಲಿ ನಡೆದ ಎರಡು ದಿನಗಳ ಮಿಂಚುಳ್ಳಿ ಕಮ್ಮಟವು ಬಹಳ ಯಶಸ್ವಿಯಾಗಿದೆ, ವಿಶೇಷವಾಗಿ ಮಾರ್ಗದರ್ಶನ ನೀಡಿದ ನಾಡಿನ ಖ್ಯಾತ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಮತ್ತು ಕಥಾ ಗೋಷ್ಠಿಗಳ ಸಂಪನ್ಮೂಲ ವ್ಯಕ್ತಿಗಳಾದ ಡಾ. ಕರೀಗೌಡ ಬೀಚನಹಳ್ಳಿ, ಡಾ. ಅಮರೇಶ ನುಗಡೋಣಿ,  ಕಾವ್ಯ ಮತ್ತು ಕಥಾ ಸಂವಾದ ಗೋಷ್ಠಿಗಳ ಸಮನ್ವಯ ಮಾಡಿದ ಡಾ. ರವಿಕುಮಾರ್ ಪಿ.ಜಿ. ಮತ್ತು ಡಾ. ಗುರುಸ್ವಾಮಿ ಸಿ. ಅನ್ನೇಹಾಳ್, ನವಿಲುಕಲ್ಲು ಸೂರ್ಯೋದಯ ಸಮನ್ವಯ ನಡೆಸಿಕೊಟ್ಟ ಡಾ. ಹಕೀಮ್ ಮತ್ತು ಫೋಟೋಗಳನ್ನು ಕ್ಲಿಕ್ಕಿಸಿದ ಅಜಯ್ ಕುಮಾರ್, ಸೋಮೇಶ್ ಸಿ.ಎಸ್. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

ಶಂಕರ್ ಸಿಹಿಮೊಗ್ಗೆ
ಸಂಪಾದಕ
ಮಿಂಚುಳ್ಳಿ ಸಾಹಿತ್ಯ ಪತ್ರಿಕೆ

ನೋಂದಾವಣಿಯ ಸಮಯ:-

ಉದ್ಘಾಟನೆ ಮತ್ತು ಗೋಷ್ಠಿಗಳು @ಹೇಮಾಂಗಣ :-

ನವಿಲುಕಲ್ಲು ಸೂರ್ಯೋದಯ ಮತ್ತು ಚಿಬ್ಬಲು ಗುಡ್ಡೆ ಪ್ರವಾಸ :-

ಆಯ್ದ ಕಾವ್ಯ ಮತ್ತು ಕಥಾ ಸಂವಾದ :-

ಕುವೆಂಪು ಜನ್ಮಸ್ಥಳ ಹೀರಿಕೊಡಿಗೆ ಪ್ರವಾಸ :-

ದೇವರು ರುಜು ಮಾಡಿದನು @ಚಿಬ್ಬಲು ಗುಡ್ಡೆ ಪ್ರವಾಸ

ಕವಿಶೈಲದಲ್ಲಿ ಮಿಂಚುಳ್ಳಿ ಕವಿಗೋಷ್ಠಿ :-

ಕಮ್ಮಟದ ಆಹ್ವಾನ ಪತ್ರಿಕೆ :-

 

 

 

 

ಚಂದಾದಾರರಾಗಿ
ವಿಭಾಗ
13 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop