(೧)
ಗುಂಡನ ಅಂಗಡಿ
ಊರಮುಂದಿನ ಶಾಲೆಯ ಎದುರು
ಗುಂಡ ಅಂಗಡಿ ತೆರೆದಿದ್ದ
ಅಂಗಡಿ ಮುಂದೆ ದೊಡ್ಡದೊಂದು
ಬೋರ್ಡು ನೇತುಹಾಕಿದ್ದ
“ನಗದಿ ಪ್ರೇಮ ಸಂಗ – ಉದ್ರಿ
ಮಾನಭಂಗ” ಅಂತ್ ಬರೆಸಿದ್ದ
ನಗದಿ ಹುಡುಗರು ಬರುತಿದ್ರು
ಉದ್ರಿ ಹುಡುಗರು ಬೈತಿದ್ರು…
(೨)
ನಂದು ಚಂದು
ನಂದು ಚಂದು ಜೀವದ ಗೆಳೆಯರು
ಆಟದ ಬಯಲಿಗೆ ಬಂದ್ಬಿಟ್ರು
‘ಫುಟ್ಬಾಲ್ಆಡುತ’ ಓಡುತ ಬಿದ್ದಾ-
ನೋವಿನಲಿ ಜಗಳಾಡ್ಕೊಂಡ್ರು
ದೋಸ್ತಿ ಠುs ಠುs ಬಿಟ್ಬಿಟ್ರು
ರಾತ್ರಿ ಕನವರಿಸುತ್ತಿದ್ರು…
ಊರ ಜಾತ್ರೆಯಲಿ ಪೀ ಪೀ ಬದಲಿಸಿ
ದೋಸ್ತಿ ‘ರಿs ನ್ಯೂ’ ಮಾಡ್ಕೊಂಡ್ರು…
(೩)
ಕಿಲಾಡಿ ಕಿಟ್ಟ
ಕಿಟ್ಟ ಕಿಟ್ಟ ಕಿಲಾಡಿ ಕಿಟ್ಟ
ಹೋಟೆಲ್ನೊಳಗೆ ಬಂದ್ಬಿಟ್ಟ
ಎರಡೆರ್ಡ್ ಪ್ಲೇಟು ಪುಗ್ಗಿ ತಿಂದು
ಬಿಕ್ಕಳಿಸುತ ಮನೆಗೋಡ್ಬಿಟ್ಟ…
ಬಾಯಿಗೆ ಖಾರ ಹತ್ಬಿಟ್ತು
ಕಣ್ಣಲಿ ನೀರು ಬಂದ್ಬಿಟ್ತು…
ಎಂದೂ ಪುಗ್ಗಿ ತಿನ್ಬಾರ್ದಂದ
ಲಾಡೂ ತಿಂದು ನಕ್ಬಿಟ್ಟ…