ಪ್ರಭುರಾಜ ಅರಣಕಲ್ ಅವರು ಬರೆದ ಮಕ್ಕಳ ಕವಿತೆ ‘ಕಪ್ಪೆಗಳಿಗೌತಣ’

ಊರ ಸಣ್ಣಕೆರೆಯದು ತುಂಬಿತ್ತು
ಕಪ್ಪೆಗಳೆಲ್ಲವು ಸೇರಿದವು
ಕೆರೆಯಲ್ಲೀಜುತ, ಗ್ವಟರ್ – ಗ್ವಟರ್
ದನಿತೆಗೆದ್ಹಾಡುತ ನಲಿತಿದ್ವು

ಕಪ್ಪೆಗಳಾಟವ ನೋಡುತ, ಶಾಲೆಯ
ಚಿಣ್ಣರೆಲ್ಲ ಕುಣಿದಾಡಿದರು
ಕಪ್ಪೆಗಳಿಗೊಂದು ಔತಣ ಕೂಟವ
ಏರ್ಪಡಿಸಲು ನಿರ್ಣಯಿಸಿದರು

ಕರಿದಿರುವಂತಹ ಹಪ್ಪಳ ಸಂಡಿಗೆ
ಮೊರಗಳ ತುಂಬಿ ತಂದ್ಬಿಟ್ರು
ಕೆರೆಯ ದಂಡೆಯಲಿ ಚಾಪೆಯ ಹಾಸಿ
ಹಪ್ಪಳ ಸಂಡಿಗೆ ಒಟ್ಟಿದರು

ತಾವೂ ತಿನ್ನುತ ಕೆರೆಯಲಿ ಚೆಲ್ಲುತ
ಹಪ್ಪಳ ಸಂಡಿಗೆ ಮುಗಿಸಿದರು
ಕಪ್ಪೆಗಳಿಗಿತ್ತ ಔತಣಕೂಟಕೆ
ಒಪ್ಪಿದ ಹಿರಿಯರ ನಮಿಸಿದರು

ಕೆರೆಯಲಿ ತೇಲಿದ ಹಪ್ಪಳ ಸಂಡಿಗೆ
ಕಪ್ಪೆಗಳೆಲ್ಲವು ನುಂಗಿದವು
ತಮಗೌತಣ ಕೊಟ್ಟೆಲ್ಲ ಮಕ್ಕಳು
ಪಾಸಾಗಲೆಂದು ಹರಸಿದವು..

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop