ವಿಜಯ ಅಮೃತರಾಜ್ ಅವರು ಬರೆದ ಕವಿತೆ ‘ಮುಂಗಾರು’

ಏನೋ ತಕರಾರು ?
ಮುಂಗಾರು ತಡವಾಯಿತು,
ರೈತನಿಗೆ ಹದ ಹೊಲದ
ಹೊಕ್ಕುಳಾಳದಿ ಬೀಜ ಬಿತ್ತುವ ತವಕ,
ಭೂಮಿಗೆ ನೀರೆರದುಕೊಂಡು
ಮೊಳಕೆ ಹೊಡೆದು ಬಸಿರಾಗುವ ಬಯಕೆ,
ಯಾರದೋ ಬಯೆಕೆ
ಇನ್ನಾರದೋ ತವಕ
ನಮ್ಮ ಪ್ರೀತಿ ಸಹಿತ ಹಿತ.

ತಾಜಾ ತಂಪಿನ ಅಪ್ಪುಗೆ
ಬಿಸಿ ಬಿಸಿ ಕಾಯ್ದ ನೆಲಕೆ,
ಒಡಲಾಳದಿ ಅವಿತ ಬೀಜಕ್ಕೆ
ಉಗುರು ಬೆಚ್ಚಗಿನ ತಲೆ ಸ್ನಾನ,
ನನಗೆ ಪ್ರತಿ ಮುಂಗಾರಿನಲ್ಲೂ
ಅದೇ ಹಳೆಯ ಗೆಳತಿಯ
ನೆನಪುಗಳೇ ತಾಜಾ ತಾಜಾ.

ಮುಂಗಾರು ಮಳೆಗೆ ಮಡಿಲಲ್ಲಿ
ಬಚ್ಚಿಟ್ಟಿಕೊಂಡ ಪ್ರೀತಿ ಬೀಜ
ಮೊಳೆಕೆ ಹೊಡೆದು ಜಗಕೆ ಸಾರಿದೆ ,
‘ಇನ್ನೂ ಯಾರ ಹಂಗು ಭಯ ನನಗಿಲ್ಲವೆಂದು.,’
ಬಚ್ಚಿಟ್ಟಿದ್ದ ಪ್ರೀತಿ ಬಿಚ್ಚಿದ ಗಳಿಗೆ,
ತಣ್ಣನೆಯ ಮುಂಗಾರಿನಲ್ಲೂ
ಪ್ರೇಮಿಗಳಿಗಂತು ಬಿಸಿ ಬಿಸಿ ಹೋಳಿಗೆ.

ಬಣ್ಣವಿಲ್ಲದ ಕಡು ಕಪ್ಪು ಬಣ್ಣದ ಮುಂಗಾರು
ಸಣ್ಣಗೆ ಹನಿಯುವ ತುಂತುರು ನಿಸರ್ಗ ಕಾರಂಜಿ,
ಪುಟ್ಟ ಪುಟ್ಟ ಮನಸ್ಸು ಅರಳಿಸಿದ ಪರಿಗೆ
ಪ್ರೇಮಿಗಳ ಮನಗಳ ತಾಕಲಾಟದಿಂದ
ಜೀವನವೆಲ್ಲಾ ರಂಗು ರಂಗು.

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
ಮಮತಾ ಪಾಟೀಲ್
2 July 2023 10:10

ಮನಸ್ಸಿಗೆ ಮುದ ಕೊಟ್ಟ ಕವನ

ಡಿ.ಎ. ರಾಘವೇಂದ್ರ ರಾವ್
28 June 2023 11:19

ಮುಂಗಾರು ಕವನ ಓದಿದಾಗ
ಮುಂಗಾರಿನ ಮಳೆಯಷ್ಟೇ …. ಹಿತಕೊಡುತ್ತಿದೆ.

0
    0
    Your Cart
    Your cart is emptyReturn to Shop