ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಸುಮ್ಮನೆ ಸಾಯುವುದಷ್ಟೇ ನಮ್ಮ ಕೆಲಸ’

ಅಲ್ಲಿ ಅದರಾಚೆಗೆ ಹೂ
ಅರಳಿ ನಗುತ್ತಿದೆ ಸುಮ ಬೀರಿ
ಇಲ್ಲಿ ಇದರಾಚೆಗೆ ಕಣ್ಣು ಮೂಗು
ಅರಳಿ ಸವಿಯುತ್ತಿದೆ ಸುಮ ಹೀರಿ

ಕಪ್ಪಿಟ್ಟ ಕಾರ್ಮೊಡದಿ ಸುರಿದ ಮಳೆ
ಅದೆಷ್ಟು ಕಾಲದಿಂದ ಹೀರಿ ತೃಪ್ತಿ
ಕಾಣದೆ ಉಳಿದಿದೆ ಇಳೆ ಅದಕ್ಕಾಗಿಯೇ
ಇಳೆಗೂ ಮಳೆಗೂ ತೀರದ ದಾಹ

ವಾಯು ಜಲ ಅಗ್ನಿ ಭೂಮಿ ಆಕಾಶದ
ಸೃಷ್ಟಿಯಲ್ಲಿ ಕಾಣದ ಕರ್ತನ ಮಸಲತ್ತಿನಲ್ಲಿ
ಮುಂದುವರಿದಿದೆ ಈ ಜಗದ ಸೃಷ್ಟಿ ಆದರೂ
ನಮ್ಮ ತೆವಲಿಗಿಷ್ಟು ನಮ್ಮದೇ ತರ್ಕ ವಿತರ್ಕ

ನಾನೆಂಬ ಅಹಂ ಒಳಗೆ ನಮ್ಮದೆಲ್ಲಾ
ಮಹಲು, ತೋಟ, ಗದ್ದೆ, ಹೊಲ, ಕೆರೆ ಕಟ್ಟೆ
ಕಟ್ಟುವ ಹಾಗೂ ರೈಲು ವಿಮಾನ ಬಿಡುವ
ಆಟಗಳು ಆಟಾಟೋಪಗಳಷ್ಟೆ ಕ್ಷಣಿಕ

ವಾಯುವಂತೆ ಮತ್ತೊಂದು, ಜಲದಂತೆ
ಇನ್ನೊಂದು, ಅಗ್ನಿಯಂತೆ ಮಗದೊಂದು
ಭೂಮಿ ಆಕಾಶದಂತೆ ಮತ್ತೇನನ್ನೂ
ಸೃಷ್ಟಿಸಲಾಗದೆ ಹೋಗುತ್ತಿದ್ದೇವೆ ಎನ್ನುವ ಸಂಕಟವಷ್ಟೆ.

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಕವಿತ ಅವನಿ
12 July 2023 18:04

ನಾನೆಂಬ ಅಹಂ ಎಲ್ಲ ಬದಿಗಿಟ್ಟು ಸಾವಿಗಾಗಿ ಕಾಯುವುದು , ವಾಸ್ತವ ಬದುಕಿನ ಚಿತ್ರಣವನ್ನು ಚೆನ್ನಾಗಿ ವಿವರಿದಿದಗದೀರ.

0
    0
    Your Cart
    Your cart is emptyReturn to Shop