ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಕತ್ತಲೆಯ ಹಾಡು ಕೇಳುವರಾರು?’

ಅಲ್ಲಿ ಅವರು ಸೂರಿಗಾಗಿ ಮೊರೆಯಿಡುವಾಗ
ಇಲ್ಲಿ ಇವರು ಮಂದಿರಕ್ಕಾಗಿ ಮಾರ್ಧನಿಸುತ್ತಿದ್ದಾರೆ
ಅಲ್ಲಿ ಅವರು ಹಸಿವಿಗಾಗಿ ಅಳುತ್ತಿರುವಾಗ
ಇಲ್ಲಿ ಇವರು ಹೆಸರು ಬದಲಿಸಲು ನಿಂತಿದ್ದಾರೆ

ಅಲ್ಲಿ ಅವರು ಮಾನಕ್ಕಾಗಿ ಅಳುತ್ತಿರುವಾಗ
ಇಲ್ಲಿ ಇವರು ಭಕ್ತಿಗಾಗಿ ಬಡಿದಾಡುತ್ತಿದ್ದಾರೆ
ಅಲ್ಲಿ ಅವರು ದಾಹಕ್ಕಾಗಿ ಹಾತೊರೆಯುವಾಗ
ಇಲ್ಲಿ ಇವರು ಲೀಟರಿನ ಲೆಕ್ಕಾಚಾರದಲ್ಲಿದ್ದಾರೆ

ಅಲ್ಲಿ ಅವರು ಉಸಿರಿಗಾಗಿ ಪರದಾಡುವಾಗ
ಇಲ್ಲಿ ಇವರು ಗಾಳಿಯ ಜೊತೆ ವ್ಯವಹರಿಸುತ್ತಿದ್ದಾರೆ
ಅಲ್ಲಿ ಅವರು ಹಾಲಿಗಾಗಿ ಹಂಬಲಿಸುವಾಗ
ಇಲ್ಲಿ ಇವರು ನೈವೇದ್ಯಯ ಚಿಂತೆಯಲ್ಲಿದ್ದಾರೆ

ಅಲ್ಲಿ ಅವರು ಆಕಾಶ ನೋಡುತ್ತಿರುವಾಗ
ಇಲ್ಲಿ ಇವರು ತಿಂದು ತೇಗುತ್ತಿದ್ದಾರೆ
ಅಲ್ಲಿ ಅವರು ಕೂಲಿ ಕೇಳುತ್ತಿರುವಾಗ
ಇಲ್ಲಿ ಇವರು ಮನುಷ್ಯರಾಗಿರುವುದನ್ನೇ ಮರೆತಿದ್ದಾರೆ

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ವಿ.ಎಸ್.ಸರಸ್ವತಿ
12 September 2023 09:43

ಇಂದಿನ ಪೀಳಿಗೆಯ ವ್ಯಕ್ತಿತ್ವ ಮನಸ್ಥಿತಿಯನ್ನ ಕವನದ ಮೂಲಕ ಬಹಳ ಸೊಗಸಾಗಿ ಬರೆದಿದ್ದೀರಿ.

0
    0
    Your Cart
    Your cart is emptyReturn to Shop