ಓ, ಎನ್ನ ಮನದನ್ನೆ…
ಒಲವಿನ ನೋಟ ಬೀರಿ
ನೀ, ಹೀಗೆ ಬಂದು ಹಾಗೆ
ಹೋಗುವುದ್ಯಾತಕೆ?
ಕುಗ್ಗಿದ ಮನವ ಅರಳಿಸಿ
ಮತ್ತೆ ಗೆಲುವು ಮೂಡಿಸಲು
ನೀ- ಬರಬಾರದೇತಕೆ?
ಜನಕೆ ಹೆದರಿ, ನೀ ದೂರ
ಸರಿದರೆ-ಎನ್ನ ಹೂ ಮನವು
ಬಾಡುವುದೆಂದು ತಿಳಿಯದ್ಯಾತಕೆ?
ಒಲವಿದ್ದರೆ ಅಲ್ಲಿ ಗೆಲುವು
ಗೆಲುವು ಇದ್ದೆಡೆ ಅಲ್ಲಿ ನಲಿವು
ಎನುವುದು ಹೇಳಿ ಕೊಡಬೇಕೆ?
ಸುಡುವ ವಿರಹಾಗ್ನಿ ಮನದ
ನೆಮ್ಮದಿಯನು ಸುಡುವುದೆಂದು
ನಿನಗೆ ಅರಿಯದ್ಯಾತಕೆ?
ಹೆಚ್ಚು ಕಾಡದೇ, ಇನ್ನು ಹುಚ್ಚು
ಹಿಡಿಯುವ ಮುನ್ನ – ನೀ
ಒಮ್ಮೆ ಕಾಣಬಾರದೇತಕೆ?