ನಿವೇದಿತಾ ಮಂಗಳೂರು ಅವರು ಬರೆದ ಕವಿತೆ ‘ಉಳಿದು ಬಿಡೋಣ’

 

ಒಲವಾಗಿಯೇ ಉಳಿದು ಬಿಡೋಣ
ನೀಲ್ಬಾನು ಮತ್ತು ಹಕ್ಕಿಗಳಂತೆ
ಬುವಿಯೊಡಲಿಗೆ ತಂಪೆರೆವ ವೃಷ್ಟಿಯಂತೆ
ಭಾನ್ಕಿರಣಕೆ ಮುಗುಳ್ನಗುವ ಕಮಲೆಯಂತೆ

ಒಲವಾಗಿಯೇ ಉಳಿದು ಬಿಡೋಣ
ಸಂಬಂಧವೆಂಬ ಬೇಲಿಯ ಹೊರತಾಗಿ
ಸಮಾಜದ ಕಟ್ಟುಕಟ್ಟಳೆಗಳಿಂದ ಪಾರಾಗಿ
ಹೃದಯಗಳ ಸೌಖ್ಯದ ಪರವಾಗಿ

ಒಲವಾಗಿಯೇ ಉಳಿದು ಬಿಡೋಣ
ಯಮುನೆಯ ಮಡಿಲಿನ ರಾಧಾ-ಶ್ಯಾಮರಂತೆ
ಚಂದಿರನು ಸುರಿಸುವ ಬೆಳದಿಂಗಳಂತೆ
ತಂಬೂರಿಗೆ ಜೀವತುಂಬಿದ ಮೀರಾ-ಮಾಧವರಂತೆ

ಒಲವಾಗಿಯೇ ಉಳಿದು ಬಿಡೋಣ
ಹೃದಯಗಳ ಮೌನಕ್ಕೆ ಕಿವಿಯಾಗೋಣ
ಭಾವನೆಗಳ ಹರಿವಲ್ಲೇ ಕರಗಿಬಿಡೋಣ
ಹ್ಞಂ ಒಲವಾಗಿಯೇ ಉಳಿದುಬಿಡೋಣ

0
0
Your Cart
Your cart is emptyReturn to Shop