ಸರೋಜಾನಂದನ ಅವರು ಬರೆದ ಕವಿತೆ ‘ಮುದುಕಿಯ ಬಯಕೆ’

ಹೊರೆಯಾಗಲೊಲ್ಲೆ ಬಾಳಿನಲಿ
ಕೊನೆಯುಸಿರು ಕೈ ಬಿಡುವ ತನಕ
ಸೆರೆಯಾಗಲೊಲ್ಲೆ ಋಣಗಳಲಿ
ಎನುತಲಿದೆ ಜೀವನದ ತವಕ

ಹರಸಿರಲು ಭಗವಂತ ಒಲವ
ಹಂಚಿಹುದು ಮಡಿಲ ಮರಿಗಳಲಿ
ಮುಪ್ಪಿನಲಿ ಒಬ್ಬೊಂಟಿ ಜೀವ
ಕಿರು ಸ್ವಾಭಿಮಾನ ನರಗಳಲಿ

ಅವರಿವರ ಜೊತೆಗೊಂದು ಮಾತು
ಇಣುಕಿಸದೆ ನೋವ ನಗುವಿನಲಿ
ಶಪಿಸದೇ ಕುಡಿಗಳನು ಕುಳಿತು
ಹರಸುತಿದೆ ಸುಕ್ಕು ಮಿನುಗುತಲಿ

ಜೊತೆಗಾಗಿ ನಿಲ್ಲು ಎನಲಾರೆ
ಬದುಕು ಕಟ್ಟುತಿಹ ಮಕ್ಕಳಲಿ
ಭಾರವಾಗಿ ನಾ ಇರಲಾರೆ
ನುಡಿದ ಮುದಿಜೀವ ನಗುತಲಿ!

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop