ಕಸಿ ವಿಸಿಗೊಂಡಾ ಹೆಂಡತಿ ಗಂಡ
ಸಿಹಿ ನೋಡೆಂದೊಡೆ ಕಹಿ ಸಿಹಿಗೊಂಡಾ
ಹಸಿ ಬಿಸಿ ಉಂಡಾ ಇವ ಬಲು ಭಂಡಾ
ಬಂಡಿಯ ಮೇಲೆ ಹೆಂಡತಿ ಕಂಡಾ
ಕೆಂಡವ ಹೊತ್ತಾ ಬಸವನ ಕಂಡಾ
ಹಂಡೆಯ ಮೇಲೆ ತಾ ಕುಂತುಂಡ
ನಕ್ಕನು ಇವನು ಯಾರೋ ಮಹಿಳೆಯ ನೋಡಿ
ನಕ್ಕಳು ಹೆಂಡತಿ ಇವನಾ ನೋಡಿ
ಅತ್ತನು ಇವನು ಬೆತ್ತವ ನೋಡಿ
ಅತ್ತೆಯ ಇಳಿದಳು ಹೊತ್ತಿಗೆ ತಂದಳು
ಸುತ್ತಿಗೆ ಹಿಡಿದು ನೆತ್ತಿಗೆ ಬಿಟ್ಟಳು
ಮೆತ್ತಗೆ ನುಡಿದಳು ಕಾಲೊತ್ತೆಂದಳು
ಗೆಳಯರು ಬಂದರು ಕೊಡು ನೀರೆಂದರು
ಅವಳನು ಕಂಡರು ಬಿಡು ಬೇಡೆಂದರು
ಗರಿ ಗೆದರೆದ್ದಳು ಬರ್ರನೆ ಹೊರಟರು
ಅನುಜನು ಬಂದನು ಅಂಜುತಲೆಂದನು
ಅಟ್ಟಡವಿಗೆ ಸಿಕ್ಕ ಹೋರಿಯ ಕಂಡನು
‘ವರ’ಕರು ನಾ ವ್ಯಾಘ್ರನಡಿ ದೂಕದಿರು ಎಂದನು
ಅತ್ತಿಗೆ ಬಂದಳು ನಯವಾಗಿ ಅಂದಳು
ಹೆಣ್ಣನು ಅರಿಯದೆ ಹೊನ್ನವ ನುಂಗಿ
ಬಾಳನು ಕತ್ತಲೆ ಮಾಡದಿರು ಎಂದಳು
ಕರಗಿತು ಮನ ಮರುಗಿದ ಮಡದಿಯ ಕಂಡು
ಹರಿದು ಹೋಗುವ ಧನವನು ಸುಲಿದು
ಮದುವೆಗೆ ಬಂದ ತನ್ನ ತಂಗಿಯ ನೆನೆದು
ಎಂದನು ಮಡದಿಗೆ ಎಡವಿದನೆಂದು
ಸುಂದರ ಬಾಳನು ಕದಡಿದೇನೆಂದು
ಮನದ ಜ್ವಾಲೆ ನಂದಿಸಲೆಂದು