ಷಣ್ಮುಖಾರಾಧ್ಯ ಕೆ ಪಿ ಕಲ್ಲೂಡಿ ಅವರು ಬರೆದ ಕವಿತೆ “ಬೈ 2 ಕಾಫಿ”

ಹೇಗೆ ಶುರು ಮಾಡಲಿ ಮೊದಲ ಸಾಲು
ನನ್ನ ಒಳಗೆ, ಹೊರಗೆ ಚಳಿ ಕಾಡುತ್ತಿರಲು
ಬಿಸಿ ಕಾಫಿಯ ಹಿಡಿದು ಕೈ ನಡುಗುತ್ತಿರಲು
ನನ್ನ ಮುಂದೆ ಕುಳಿತ ಆ ನಗು ಕೆಣಕುತ್ತಿರಲು

ಮೊದಲ ಭೇಟಿಯ ಸಿಹಿಯಾದ ತಲ್ಲಣ
ಸುಂದರ ಮೌನದ ಸುದೀರ್ಘ ಪ್ರಯಾಣ
ಅಂತರವಿದ್ದರೂ ಅಂತರಂಗ ಪಯಣ
ಮಾತಿಗಿಂತ ಮೌನವೇ ಹಿತವೆನಿಸುವ ವಾತಾವರಣ

ಬೆಚ್ಚನೆಯ ಅನುಭವಕೆ ಆ ಕೈಗಳೇ ಈಗ ಪರಿಹಾರ
ಆಮಂತ್ರಣವಿಲ್ಲದೆ ಸಿಗಬಹುದೇ ಆ ಉಪಕಾರ
ಕನಸಲ್ಲಾದರೂ ಮುಂಗುರುಳ ಸರಿಪಡಿಸಿಸುವ ಅಧಿಕಾರ
ನನ್ನ ಅರಿವಿಲ್ಲದೆ ನಡೆಯುತ್ತಿದೆ ಹೀಗೆ ಹೃದಯದ ಲೆಕ್ಕಾಚಾರ

ಅರೆ ನೋಟದ ಅವಾಂತರಕೆ ಬಲಿಯಾದವು ಎಲ್ಲ ಕನಸುಗಳು
ಪೂರ್ಣ ನೋಟಕೆ ಊಹಿಸಬಹುದೇ ನನ್ನ ಉಳಿಗಾಲದ ದಿನಗಳು
ನನ್ನ ಅರಿವಿಲ್ಲದೆ ನಡೆಯುತ್ತಿದೆ ಹೀಗೆ ಅಕ್ಷರಗಳ ಚಳುವಳಿಗಳು
ಬಿಸಿ ಕಾಫಿ ಹಿಡಿದು ನಡುಗುತ್ತಿವೆ ಕೈಗಳು ನೀ ಎದುರಿಗೆ ಇರಲು

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
    0
    Your Cart
    Your cart is emptyReturn to Shop