ಶ್ರೀನಿವಾಸ್ ಕೆ. ಎಂ. ಅವರು ಬರೆದ ಕವಿತೆ ‘ಮಾತು ಮುಂದುವರೆದಿತ್ತು..’

ಮಾತು ಮುಂದುವರೆದಿತ್ತು..
ತಮ್ಮ ತಮ್ಮ ಪಾಡಿಗೆ
ತಮ್ಮದೇ ಆಲೋಚನೆಯಲಿ
ತಲ್ಲೀನ

ಯಾರೋ ಕೂಗಿ ಕರೆದರು
ನೀವು, ನೆನ್ನಯ ಪ್ರಶ್ನೆಗೆ
ಉತ್ತರ ಸಿಕ್ಕಿತೆ ಎಂದು
ಕೇಳಿದರೆ
ಮೂಕರಾದರಲ್ಲ

ಅಯ್ಯೋ!
ಮರೆತು ಬಿಟ್ಟಿರುವ ಆಗಿದೆ…
ಗುಟ್ಟು ರಟ್ಟಾದ ವಿಷಯವ
ತಿಳಿಸಲೆ ಇಲ್ಲವಲ್ಲ!

ಮಾತು ಮುಂದುವರೆದಿತ್ತು
ನನ್ನ ಅವನ ನಡುವೆ!

ಕವಿದ ಕತ್ತಲೆಯ ನಡುವೆ
ಏನೋ ಹುಡುಕುತಿರುವ
ಆಕಾಶದ ಕಡೆ ಮುಖ ಮಾಡಿ
ಮೂಕ ಪ್ರೇಕ್ಷಕನಂತೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop