ಸುರೇಶ್ ಕಲಾಪ್ರಿಯಾ ಗರಗದಹಳ್ಳಿ ಅವರು ಬರೆದ ಕವಿತೆ ‘ಗುರು-ಮೇರು’

ನಾ ಕಂಡ ಕನಸಿಗೆ
ಜೋಡಿ ಕಣ್ಣುಗಳಾಗುತ
ಎತ್ತರದ ಗುರಿಗೆ
ಏಣಿಯಾದವರೇ
ನನ್ನ ಗುರುಗಳೇ ಸದ್ಗುರುಗಳೇ
ಎರಗುವೆ ಶಿರಬಾಗಿ

ಬಡತನದ ಭವಣೆಯ
ಕ್ಷಣದಲ್ಲಿ ಮರೆಸುತ
ಗುರಿಯತ್ತ ಚಿತ್ತ
ಇರಿಸಬೇಕೆಂದವರೇ
ನನ್ನ ಗುರುಗಳೇ ಸದ್ಗುರುಗಳೇ
ಎರಗುವೇ ಶಿರಬಾಗಿ

ಓದೋ ಪುಸ್ತಕ ಕೊಟ್ಟು
ಬರೆವ ಬಳಪ ಕೊಡಿಸುತ
ಚಿಂತೆಯಲಿ ಕುಳಿತು
ಅಳುವವಗೆ ಬೆಳಕಾದವರೇ
ನನ್ನ ಗುರುಗಳೇ ಸದ್ಗುರುಗಳೇ
ಎರಗುವೆ ಶಿರಬಾಗಿ

ಕಿಸೆಯ ಹಣವನ್ನು ವ್ಯಯಿಸಿ
ಓದಿಗೆ ನೆರವಾಗುತ
ನಾವೇನೂ ಮಾಡಿಲ್ಲ
ಎಂದು ಮರೆತವರೇ
ನನ್ನ ಗುರುಗಳೇ ಸದ್ಗುರುಗಳೇ
ಎರಗುವೆ ಶಿರಬಾಗಿ

ಬುದ್ದಿ ಮಾತಲಿ ಅರುಹಿ
ಪುಟ್ಟ ಏಟನು ಕೊಡುತ
ಭವಿಷ್ಯದ ಬದುಕನು
ಯೋಚಿಸು ಎಂದವರೇ
ನನ್ನ ಗುರುಗಳೇ ಸದ್ಗುರುಗಳೇ
ಎರಗುವೆ ಶಿರಬಾಗಿ

ಮರೆಯುವಂತಿಲ್ಲ ಖುಣ
ತೀರದದು ಕೊನೆತನಕ
ಸುಖದ ಇಂದಿನ ತುತ್ತು
ನನಗಾಗಿ ಕರುಣಿಸಿದವರೇ
ನನ್ನ ಗುರುಗಳೇ ಸದ್ಗುರುಗಳೇ
ಎರಗುವೆ ಶಿರಬಾಗಿ

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಚಿದಾನಂದ ಮಾಯಾಚಾರಿ
5 July 2023 07:46

👏👏👏

0
    0
    Your Cart
    Your cart is emptyReturn to Shop