ಶ್ರೀಧರ ಜಿ ಯರವರಹಳ್ಳಿ ಅವರು ಬರೆದ ಕವಿತೆ ‘ಎದ್ದೇಳು ಮಾರಾಯ’

ಎದ್ದೇಳು ಮಾರಾಯ
ಕಣ್ಣಿಗೆ ಕಪ್ಪುಕನಸುಗಳ ದಾಹವೇ!
ಹೃದಯಕ್ಕೆ ಧರ್ಮದ ಜೂಜಾಟವೇ?
ಹೆಜ್ಜೆಹೆಜ್ಜೆಗೂ ಒಳಕಣ್ಣ ತೆರೆದಿಡು
ಎದ್ದೇಳು ಮಾರಾಯ
ಅವರೇನು ಮಾಡುವರು!

ಚಚ್ಚಿಬಿಡು ಎಲ್ಲ ಧರ್ಮಗಳ
ಕಲ್ಲಾದ ಹೃದಯದ ಅದೇ ಕಲ್ಲಿನಲಿ
ಹೀರಿಬಿಡು ನರಹುರಿಗಳಲ್ಲಿನ
ಮಾನವ ದ್ವೇಷದ ಕಾವ
ಬತ್ತಿಯಾಗಿಸು, ಜ್ಞಾನದ ರಕ್ತವ ಹರಿಸಿ
ಉರಿಸು ದೀಪವ, ಬೆಳಗಲಿ ವಿಜ್ಞಾನ
ಎದ್ದೇಳು ಮಾರಾಯ ಎದ್ದೇಳು
ಅವರೇನು ಮಾಡುವರು!

ಎಂದೊ ಬೆರೆತೋದ ಎಲೆಯುಸಿರು
ಮಳೆ ಗಾಳಿ ಬೆಳಕು
ಚಿಗುರಿಸುತ್ತಿವೆ ಎಲ್ಲಾ ಜೀವಿಯ ಮನವ ಬೆಳಗಿ
ಚದುರಿದ ಹೊಂಗಿರಣ ಗಳು ಸೀಳಿವೆ
ಎಲ್ಲರೆದೆಯ ನೋವಿನರಮನೆಯ
ವಶವಾದಂತಿವೆ ಸಂತೋಷದ ವಿಹಾರ ಮಾತುಗಳು
ನಮ್ಮ ನಿಂದಿಸಿಯೇ ಇವೆ
ಎದ್ದೇಳು ಮಾರಾಯ ಎದ್ದೇಳು
ಅವರೇನು ಮಾಡುವರು!

ಎದ್ದೇಳು ಮಾರಾಯ ಎದ್ದೇಳು
ವಾಕರಿಕೆ ಬರುವ ಮುನ್ನ
ಇನ್ನೆಷ್ಟು ದಿನ ಹೋರಾಟದ ಹಾದಿಯಲಿ ನಿದ್ರಿಸುವುದು
ರಕ್ಕಸರು ನಮ್ಮಲ್ಲಿಯೇ
ಉಳಿದುಕೊಂಡಿಹರು
ಸಂಶಯಾಸ್ಪದ ಸಾವವರು
ನೆಲಕ್ಕೂರಿಸು ಪದಗಳ ಪಾದಗಳ
ಸುದ್ಧಿಯ ಯುದ್ಧ ಮಾಡು ಎಡೆಬಿಡದೆ
ನಮ್ಮವರಿಗಾಗಿ ನಮ್ಮ ಹಿತಕ್ಕಾಗಿ
ಸಂ-ವಿಧಾನಗಳ ಬದಲಿಸಲು ಬಿಡಬೇಡ
ಎದ್ದೇಳು ಮಾರಾಯ ಎದ್ದೇಳು
ಅವರೇನು ಮಾಡುವರು!
ನಿನ್ನ ಕರುಣೆಯ ಕಿಚ್ಚು
ಅವರ‌ನ್ನೇ ಸುಟ್ಟುಬಿಟ್ಟೀತು
ಎದ್ದೇಳು ಮಾರಾಯ ಎದ್ದೇಳು

ಚಂದಾದಾರರಾಗಿ
ವಿಭಾಗ
4 ಪ್ರತಿಕ್ರಿಯೆಗಳು
Inline Feedbacks
View all comments
Rakesh. Ranganahalli
20 September 2023 12:41

Super

ರಂಗನಾಥ್
19 September 2023 19:49

ಚೆನ್ನಾಗಿದೆ…

Govindappa
18 September 2023 22:19

Super

ಶಾಂತರಾಜು ಹೆಚ್ ಬಿ
18 September 2023 19:32

ತುಂಬಾ ಚೆನ್ನಾಗಿದೆ ಶ್ರೀಧರ್

0
    0
    Your Cart
    Your cart is emptyReturn to Shop