ಸೂಗಮ್ಮ ಡಿ ಪಾಟೀಲ್ ಅವರು ಬರೆದ ಕವಿತೆ ‘ಸಂಜೆ ಮಲ್ಲಿಗೆ’

ಬಣ್ಣ ಬಣ್ಣದ ಸಂಜೆ ಮಲ್ಲಿಗೆ
ಗಮನ ಸೆಳೆದಿದೆ ಇಂದು ಮೆಲ್ಲಗೆ

ಕಂಪು ಸೂಸುತ ನಗೆಯ ಬೀರಿದೆ
ತಂಪಿನಂಗಳದ ತುಂಬಾ ಹರಡಿದೆ

ಬಾಡಿ ಹೋಗುವ ಚಿಂತೆಯು ಇಲ್ಲ
ಸಾಲು ಬಯಕೆಯ ಕಂತೆಯು ಇಲ್ಲ

ಪರರಿಗಾಗಿ ಸದಾ ಅರಳಿ ನಲಿಯುವೆ
ಮರಳಿ ಮಣ್ಣಲಿ ಬೆರೆತು ಹೋಗುವೆ

ಸಂಜೆವೇಳೆಗೆ ಸೊಬಗು ಮೂಡಿಸಿದೆ
ಕ್ಷಣದಿ ಇದ್ದರು ಖುಷಿಯನ್ನು ಹಂಚಿದೆ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop