ಸೂಗಮ್ಮ ಡಿ ಪಾಟೀಲ್ ಅವರು ಬರೆದ ಕವಿತೆ ‘ನನ್ನರಸಿ’

ಕುಣಿಯುವಾಗ ಹೆಜ್ಜೆಗಳ ಲೆಕ್ಕ ಏತಕೆ
ಮಣಿದಿರಲು ಒಲವಿಗೆ ಸಾಕ್ಷಿಯು ಬೇಕೆ
ಋಣವಿರಲು ಭಾಗ್ಯದಿ ಅನುಮಾನವೇಕೆ
ಹಣತೆಯಲಿ ಪ್ರೇಮದ ತೈಲವನು ಹಾಕೆ

ಒಲವ ಗೆಜ್ಜೆಯಲಿ ಹೆಜ್ಜೆಯನು ಇಟ್ಟು
ಚೆಲುವ ಮೊಗದಲ್ಲಿ ಸಿಂಧೂರವನಿಟ್ಟು
ಬಲಗಾಲು ಒಳಗಿಟ್ಟು ಬಾರೇ ದಯವಿಟ್ಟು
ನೆಲೆಸಿಬಿಡು ಹೃದಯದಲಿ ಪ್ರೀತಿಯ ಕೊಟ್ಟು

ದಾರಿ ಸರಿಯದು ಜೊತೆಯಾಗಿ ನೀನಿರಲು
ಮರೆಯುವೆ ಎಲ್ಲಾ ನೋವು ರೆಪ್ಪೆ ನೀನಾಗಲು
ಶೃಂಗಾರಗೊಂಡ ಭೂರಮೆಯ ಹಸಿರಿನಲಿ
ಬಂಗಾರದಂಗೆ ನನ್ನ ಮನಸನು ಸೆಳೆದವಳು

ಜಾಗ ನೀಡಬಾರದೆ ನಿನ್ನ ಪುಟ್ಟ ಗೂಡಲ್ಲಿಂದು
ಕೂಗಿ ಹೇಳಬಾರದೆ ನನ್ನ ಜೀವವೆ ನೀನೆಂದು
ಬಾಗಿ ಬಾಗಿ ಸೋತು ಹೋಗಿಹೆನು ನಾನಿಂದು
ಬೇಗ ಬಂದು ಸೇರಿಬಿಡು ಮನಸಾರೆ ಇಂದು

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
ಜಯಪ್ರಕಾಶ ಹಬ್ಬು, ಬಿದರಲ್ಲಿ, ಶಿರಸಿ
29 August 2023 19:44

ಕನಸಿನೊಳಗಿನ ಮನ ಸುಂದರವಾದ ಪ್ರೇಮ ಗೀತೆ ಪಾಟೀಲರ ಬರೆಹ ಅನಾವರಣಾಗೊಳಿಸಿದೆ.

0
    0
    Your Cart
    Your cart is emptyReturn to Shop