ದೇವನು ಹುಡುಗನಂತೆ
…… ಆಡಲು….
ಆಟಿಕೆ ಬೇಕಂತೆ
ನಾನು ನೀನು ಆಟಿಕೆಯಂತೆ
ಒಂದೊಂದು ಗೊಂಬೆಯೊಡನೆ
ಒಂದೊಂದು ಆಟ
ದಣಿವಾಗಿದೆ ಎಂದರು
ಬಿಡನು ಆಟ ಹಿಡಿದು ಹಠ
ಮುರಿದು ಮುಕ್ಕಾದ
ಹಳೆ ಗೊಂಬೆಗಳ ಬಿಸಾಡಿ
ಆಟದಲ್ಲಿರುವ ಗೊಂಬೆಗಳಿಗೆ
ಬಣ್ಣದ ಪೋಷಾಕು ನೀಡಿ
ಆಡುತಿಹನು ಆಟ
ಬೇಸರ ದಣಿವ ಪರಿವಿಲ್ಲದೆ
ಹಗಲು ಇರುಳ ನಿದ್ರಾ ದಾಹದ
ಗೊಡವೆ ಇಲ್ಲದೆ…