ಶಾರದಾಸಿಂಗ್ ಶ್ರಾವಣಸಿಂಗ್ ರಜಪೂತ ಅವರು ಬರೆದ ಕವಿತೆ ‘ನಾಳೆಗಳು ನಮ್ಮವು!’

ಕಳೆದದ್ದು ಕಳೆದ್ಹೋಯ್ತು ಬಿಟ್ಟು ಬಿಡು
ನೆನಪುಗಳ ಗೋರಿ ಮೇಲೆ ನಿರ್ಮಿಸು
ಹೊಚ್ಚ ಹೊಸ ಇತಿಹಾಸ ನವಪೀಳಿಗೆಗೆ
ಏಕೆಂದರೆ ಕಳೆದದ್ದು ನಮ್ಮದಲ್ಲ;
ನಾಳೆಗಳು ನಮ್ಮವು!

ಇಲ್ಲದ್ದರ ಬಗ್ಗೆ ಚಿಂತೆ ಬಿಟ್ಟು ಬಿಡು
ವರ್ತಮಾನದ ಇರುವಿಕೆಯ ಒಟ್ಟುಗೂಡಿಸು
ಅವಕೃಪೆಗಳ ಮೀರಿ ಬೆಳೆದು ನಿನ್ನತನಕೆ
ನವಶಕ್ತಿ ಗಳಿಸು ಈ ದಿನ;ಆಗ
ನಾಳೆಗಳು ನಮ್ಮವು!

ಸುಟ್ಟುಬಿಡು ಕರಕಲಾದ ಕಾರಣಗಳು
ಅವು ನಿನ್ನವಲ್ಲವೆಂದ ಮೇಲೆ ಅಳಿಸು
ಕಳೆಗುಂದಿದ ಅವಕೆ ಹೊಸ ರಂಗು ನೀಡಿ
ನವರೂಪ ನೀಡು ಇಂದು; ಆಗ
ನಾಳೆಗಳು ನಮ್ಮವು!

ದಕ್ಕಿಸಿಕೊಂಡು ನಡೆ ಕಷ್ಟ, ಕಹಿಸತ್ಯಗಳ
ಅನುಭವಗಳು ನಾಳೆಗೆ ಸೋಪಾನವೆಂದು
ಜಗದ ಭೀತಿಗೆ ತೆರೆಯೆಳೆದು,ಸಡ್ಡೊಡೆ ಸಾಧನೆಗೆ
ದೃಢ ನಿರ್ಧಾರ ಮಾಡಿಂದು; ಆಗ
ನಾಳೆಗಳು ನಮ್ಮವು!

ತ್ಯಜಿಸಿಬಿಡು ವಿಚಾರಹೀನ ಕ್ಷುಲಕಗಳ
ಪರರ ಮನೆ ಸಾಯಿಸುವ ಅವ ನೀ ಸಾಯಿಸು
ಬಣ್ಣದೊಳಗಿನ ಬದುಕ ನೀ ಬದಲಾಯಿಸು
ಬದುಕೇ ಬಣ್ಣವಾಗುವಂತೆ ಇಂದು; ಆಗ
ನಾಳೆಗಳು ನಮ್ಮವು!

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop