ಹರೀಶ ಕೋಳಗುಂದ ಅವರು ಬರೆದ ಕವಿತೆ ‘ಮಾಯಾ ಪೆಟ್ಟಿಗೆ’

ಆಕಾಶದ ತಿರುಗಣೆಯಲ್ಲಿ
ಚಂದ್ರನ ಟಾರ್ಚಿನ ಕಣ್ಬೆಳಕು
ಕಾಲನ ಕಾಲಿಗೆ ಕಡೆಗೀಲಾಗಿದೆ
ಆಟೋಂಬಾಂಬಿನ ತಿದಿಮುರುಕು

ಕಾಡಿನ ಕುಸುಮದ ಎದೆಯೂ ಕಲ್ಲು
ಮಂಚದ ಮೇಗಡೆ ನೆಗ್ಗಲ ಮುಳ್ಳು
ಉಬ್ಬಿದ ಎದೆಗೆ ತೆವಲಿನ ಸುಂಕ
ಸೆರಗಿಗೆ ಕಟ್ಟಿದ ಕಾಮದ ಕೆಂಡ

ಫಕೀರಪ್ಪನ ಜೋಳಿಗೆಯೊಳಗೂ
ಅಕ್ಕಿ ಹುಳುಗಳ ಆಯುವ ಕೋಳಿ
ರೈಲಿಂಜಿನ್ನಿಗೆ ಜೋಡಿಸಿ ಬಿಟ್ಟಿವೆ
ನೆತ್ತರ ದಾಹದಿ ಹೋರುವ ಗೂಳಿ

ಉಪ್ಪುಮೂಟೆಯ ಬೆನ್ನಿಗೆ ಗಾಳ
ಎಳ್ಳಿನ ಹೊಲಕೆ ಬೆವರಿನ ಹೊದಿಕೆ
ಜಾವದ ಹುಂಜಕು ಅಲಾರಂ ಗಂಟೆ
ದುಡಿಯುವ ಹೆಗಲಿಗೆ ಬೊಂಬಿನ ಭಾರ

ಮಸಣದ ಬಯಲಲಿ ಹೊಂಗೆಯ ಚಿಗುರು
ಕತ್ತಲ ಸುಡುವ ಕೊಳ್ಳಿಯ ಬೆಳಕು
ಗುಡಿಸಲ ತುಂಬಾ ಸುರಗಿಯ ಘಮಲು
ಉಚ್ವಾಸ ನಿಶ್ವಾಸಕೂ ತೂಗುವ ಅಮಲು

0
    0
    Your Cart
    Your cart is emptyReturn to Shop