ಕುಲವಾವುದಾದರೇನು
ಮನವ ಅರಿತರೇ ಸಾಕು
ಮಾನವೀಯತೆಯ
ನೆಲೆಯಲ್ಲಿ ನಾವಿರಬೇಕು
ಕುಲದಗೊಡವೆಯು ಬೇಡ
ಕಲ್ಮಶದ ಕಸವ ಎಸೆದು
ಕಾಯಕದ ಎದೆಯಬೆಸೆದು
ಕದವ ತೆರೆಯಲೇಬೇಕು
ಸಮಾಜದ ಸ್ವಾಸ್ಥ್ಯವ
ಕದಡುವವರ ಕೆನ್ನೆಗೆರಡು
ಬಾರಿಸಿ ಸರಿಯಾದ ದಾರಿ
ತೋರಿಸಬೇಕು
ಕಾಲನೆದುರು ಉದುರಿ
ಹೋಗುವ ಈ ಮೂರು
ದಿನದ ಬದುಕನ್ನು
ಸದಾ ಸ್ಮರಿಸುತ್ತಾ
ಸುಂದರಗೊಳಿಸಬೇಕು
ನಿಮ್ಮೊಳಗಿನ
ನೆನಪಿನ ಬುತ್ತಿ
ಆಗಾಗ್ಗೆ ಬಿಚ್ಚುತಾ
ಹಂಚುತಲಿರಬೇಕು
ಅಂತಸ್ತಿನ ಎಲ್ಲೆ ದಾಟಿ
ನಮ್ಮೊಳಗಿನ ಅಂತಸತ್ವವ ಮೀಟಿ
ಮನುಜ ನೀತಿಯ ಸಾರುತ್ತಾ
ಸಾಗುತ್ತಿರಬೇಕು
ಎಸ್.ಪಿ. ಮಹದೇವ ಹೇರಂಬ
ಗ್ರಂಥಪಾಲಕರು ಎಂ.ಇ.ಎಸ್ ಪ.ಪೂ ಕಾಲೇಜು
ಬೆಂಗಳೂರು