ಕೀರ್ತನ ಒಕ್ಕಲಿಗ ಬೆಂಬಳೂರು ಅವರು ಬರೆದ ಕವಿತೆ ‘ನನ್ನ ಅಮ್ಮ’

ಕೀರ್ತನ ಒಕ್ಕಲಿಗ ಬೆಂಬಳೂರು

ನವಮಾಸ ಗರ್ಭದ ನೋವು ನುಂಗಿದವಳು
ಉಸಿರಿಗೆ ಉಸಿರು ಬೆರೆಸಿ ಜೀವ ನೀಡಿದವಳು
ತೊದಲು ನುಡಿಯ ಮೊದಲ ಪದವಾದವಳು
ಅಂಬೆಗಾಲಿಡುವಾಗ ಕೈ ಹಿಡಿದು ನಡೆಸಿದವಳು

ರಕ್ತ ಬೆಸೆದು ಎದೆಹಾಲು ಕುಡಿಸಿದವಳು
ಕೈ ತುತ್ತು ನೀಡಿ ಮಮತೆ ತೋರಿದವಳು
ಮುತ್ತು ನೀಡಿ ಜೋಪಾನ ಮಾಡಿದವಳು
ತನ್ನ ಮಗುವೆಂದು ಎದೆಗವಚಿ ಬೆಳೆಸಿದವಳು

ಹಸಿವು ಎಂದಾಗ ಕೈ ತುತ್ತು ನೀಡಿದಾಕೆ
ಅಳುವಾಗ ಆಸರೆಯಾದಕೆ
ನಿದ್ದೆ ಮಾಡುವಾಗ ಮಡಿಲು ತೋರಿದಾಕೆ
ಪ್ರತಿನಿತ್ಯ ನಮ್ಮ ಒಳಿತಿಗಾಗಿ ಜಪಿಸಿದವಳಾಕೆ

ಹೆಸರು ನೀಡಿ, ಬದುಕಿನ ದಾರಿ ದೀಪವಾದಾಕೆ
ಎಡವಿದಾಗ ಕೈ ಹಿಡಿದು ಎತ್ತಿದಾಕೆ
ತನ್ನೆಲ್ಲಾ ಖುಷಿಗಳನ್ನು ನಮಗಾಗಿ ಮುಡಿಪಾಗಿಟ್ಟವಳಾಕೆ
ನೋವು ಸರಿಸಿ ನಲಿವು ಹಂಚುವಳಾಕೆ

ಬಡತನದ ಬೇಗೆಯಲ್ಲಿ ಬೆಂದು
ನೋವು – ಸಂಕಷ್ಟದಿಂದ ನೊಂದು
ಕಡೆಗಣಿಸುವಳು ನಾನು, ನನ್ನದೆಂದು
ಸದಾ ನಗುವಳು ನನ್ನ ಮಕ್ಕಳೆಂದು

ಸೋತಾಗ ಆತ್ಮಸ್ಥೈರ್ಯ ತುಂಬುವಳು
ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತವಳು
ಪ್ರತಿ ಕ್ಷಣವೂ ನಮ್ಮನ್ನು ಕಾಯುವಳು
ನಿಷ್ಕಲ್ಮಶವಾದ ಹೃದಯವಂತಳು

ನೀ ನನ್ನ ನಗುವಾದೆ
ನನ್ನೆಲ್ಲಾ ನಗುವಾದೆ
ಗೆಲುವಿನ ಮೆಟ್ಟಿಲಾದೆ
ಜೀವನದ ಗುರುವಾದೆ

ನನ್ನೆಲ್ಲಾ ಖುಷಿಯ ಕಾರಣಕರ್ತೆ
ತನ್ನ ಜೀವದ ಆಸೆ ತೊರೆದು
ಇನ್ನೊಂದು ಜೀವಕ್ಕೆ ಉಸಿರಾದ ದೇವತೆ
ಕರುಳು ಬಂಧದ ಮಮತೆ
ನಿನ್ನ ಪ್ರೀತಿಯು ಒಂದು ಮುಗಿಯದ ಕವಿತೆ

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಗಣನಾಥ
19 July 2023 16:15

ಕವಿತೆಗೊಂದು ವಿಶಿಷ್ಟ ಲಯ ತಂದಿರುವುದು ಮೆಚ್ಚಬೇಕಾದ ಅಂಶ. ಆದರೆ ಉಳಿದಂತೆ ಸಾಧಾರಣ ‘ ಚರ್ವಿತ – ಚರ್ವಣ ಎನಿಸಿತು.

0
    0
    Your Cart
    Your cart is emptyReturn to Shop