ಕಾಡಜ್ಜಿ ಮಂಜುನಾಥ ಅವರು ಬರೆದ ಕವಿತೆ ‘ಸಂಘರ್ಷ ಏಕೆ?’

ಭತ್ತ ಬೆಳೆಯುವ
ಭೂಮಿ , ನೀರಿಗೂ ಇರದ
ಸಂಘರ್ಷ,
ನಾಡಿನ
ದೊರೆಗಳಿಗೇಕೆ;

ಬೀಜ ಹಾಕಿ,ನೀರು ಹರಿಸಿ
ಕೆಲಸ ಮಾಡಿದ
ರೈತನಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;

ಮಳೆ ಸುರಿಸಿದ ಮೋಡ
ಬಿಸಿಲು‌ ನೀಡಿದ
ಸೂರ್ಯನಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;

ಮೊಳೆತ ಬೀಜಕೂ
ಬಲಿತ ಭತ್ತಕೂ
ಉಸಿರು ನೀಡಿದ ಗಾಳಿಗೂ
ಇರದ ಸಂಘರ್ಷ
ದೊರೆಗಳಿಗೇಕೆ!

ಉರಿದ ಬೆಂಕಿಗೂ
ಬೆಂದ ಅಗುಳಿಗೂ
ರುಚಿ ನೀಡಿದ
ಉಪ್ಪಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;

ಹಸಿದ ಹೊಟ್ಟೆಗೂ
ಅನ್ನವಿಟ್ಟ ಕೈಯಿಗೂ
ಕವಳ ಸವಿದ ನಾಲಿಗೆಗೂ
ಇರದ ಸಂಘರ್ಷ
ದೊರೆಗಳಿಗೇಕೆ;

ಬೆಳೆಸಿದ ನಿರ್ಸಗಕೂ
ನೆರಳು ನೀಡಿದ ಮೇಘಕೂ
ಕಾಯುವ ದೇವರಿಗೂ
ಇರದ ಹೆಸರಿನ
ಸಂಘರ್ಷ
ದೊರೆಗಳಿಗೇಕೆ !!

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
ಶಂಕರಮೂರ್ತಿ.ಪಿ.
2 August 2023 22:44

Sooooooooooooper, ಅದ್ಭುತ ಬರವಣಿಗೆ, ಪಕ್ವ ಬರಹಗಾರರ ಸಾಲಿಗೆ ಸೇರುವ ಅಹ೯ತೆಯಿದೆ.

Vidya
31 July 2023 21:10

ಸತ್ಯ… ಸಂಘರ್ಷದ ಹೆಸರಲ್ಲಿ ಅಣ್ಣದಾತಟ್ ಬಡವನಾದ!

0
    0
    Your Cart
    Your cart is emptyReturn to Shop