ಸಂತೋಷ್ ಟಿ ಅವರು ಬರೆದ ಕವಿತೆ ‘ನಿನ್ನ ಮೋಹದ ಕೆಂಡರಾಶಿ’

ನಿನ್ನ ಮೋಹದ ಕೆಂಡರಾಶಿಯ ಮೇಲೆ ನಿಲ್ಲಿಸಿ
ಸುಡುವುದೆಂದು ಕೇಳಿದರೆ ಏನು ಹೇಳಲಿ ನಾನು
ದಹಿಸುವುದಾದರೆ ದಹಿಸಿ ಬಿಡು ಒಮ್ಮೆ
ಸುಟ್ಟು ಬೂದಿಯಾಗುತ್ತೇನೆ

ನಿನ್ನ ಮಾತಿನ ಮಾದಕ ಮುತ್ತಿನ ವ್ಯಾಖ್ಯೆಯ ಕೇಳಿಸಿ
ಅರ್ಥವಾಯಿತೆಂದರೆ ಏನು ಹೇಳಲಿ ನಾನು
ಕತ್ತಿಯಂಚಿನ ಮೊನಚಿನಂತೆ ಮಾತು ಇರಿದು ಬಿಡು ಒಮ್ಮೆ
ರಕ್ತಕಾರಿ ಸಾಯುತ್ತೇನೆ

ನಿನ್ನ ಕೃಷ್ಣವರ್ಣದ ಮೈಒನಪು ವೈಯಾರದ ಕಡೆ
ನೋಡ ಬೇಡವೆಂದರೆ ಏನು ಹೇಳಿಲಿ ನಾನು
ಅದ್ಭುತ ಸೌಂದರ್ಯಕೆ ಕಣ್ಣು ಕಟ್ಟಿ ಬಿಡು ಒಮ್ಮೆ
ನಿರಂತರ ಕುರಡನಾಗುತ್ತೇನೆ

ನಿನ್ನ ವಾದ ಸರಣಿಯ ಪದಗಳ ಮೇಲೆ
ಕವಿತೆ ಬರೆಯಬೇಡವೆಂದರೆ ಏನು ಹೇಳಲಿ ನಾನು
ಸಮಯ ಸ್ಫೂರ್ತಿಯ ಮನಸು ಮುಚ್ಚಿ ಬಿಡು ಒಮ್ಮೆ
ಕೈ ಕತ್ತರಿಸಿ ಕೊಳ್ಳುತ್ತೇನೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop